ದೇಶ

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!

ಪುರಿಯಲ್ಲಿ ಪ್ರಯಾಣಿಕರ ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹವನ್ನು ಪೊಲೀಸರು ವಶ ಪಡಿಸಿಕೊಂಡಿದ್ದು ಅಲ್ಲಿಂದ 20 ಕಿ.ಮೀ ದೂರದಲ್ಲಿ ರೈಲು ಹಳಿ ಬಳಿ ರುಂಡ...

ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹ ಪತ್ತೆ, 20 ಕಿ.ಮೀ ದೂರದಲ್ಲಿ ರುಂಡ, ಅತ್ಯಾಚಾರ ಶಂಕೆ!
ಸಂಗ್ರಹ ಚಿತ್ರ
Published On :
ಭುವನೇಶ್ವರ್: ಪುರಿಯಲ್ಲಿ ಪ್ರಯಾಣಿಕರ ರೈಲಿನ ಶೌಚಾಲಯದಲ್ಲಿ ರುಂಡವಿಲ್ಲದ ಮಹಿಳೆ ದೇಹವನ್ನು ಪೊಲೀಸರು ವಶ ಪಡಿಸಿಕೊಂಡಿದ್ದು ಅಲ್ಲಿಂದ 20 ಕಿ.ಮೀ ದೂರದಲ್ಲಿ ರೈಲು ಹಳಿ ಬಳಿ ರುಂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
40ರ ಆಸುಪಾಸಿನಲ್ಲಿರುವ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದು ರುಂಡ ಮುಂಡವನ್ನು ಬೇರ್ಪಡಿಸಿ ಎಸೆದಿದ್ದಾರೆ ಎಂದು ಆರ್ಪಿಎಫ್ ಇನ್ಸ್ಪೆಕ್ಟರ್ ಗಗನ್ ದಾಸ್ ತಿಳಿಸಿದ್ದಾರೆ. 
ಪುರಿ ರೈಲ್ವೆ ನಿಲ್ದಾಣದ 8ನೇ ಫ್ಲಾಟ್ ಫಾರ್ಮ್ ನಲ್ಲಿ ಮಹಿಳೆಯ ಮೃತದೇಹ ಕಂಡ ಸಹ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹತ್ಯೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.