ದೇಶ

ದೆಹಲಿ ಸಿಎಂ ವ್ಯವಹಾರ ನೈಪುಣ್ಯತೆ ತೋರಿದ್ದಾರೆ: ಕೇಜ್ರಿವಾಲ್ ಬೆನ್ನಿಗೆ ನಿಂತ ಬಿಜೆಪಿ ಮುಖಂಡ ಸಿನ್ಹಾ

ಆಡಳಿತ ವಿಚಾರದಲ್ಲಿ ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್ ವ್ಯವಹಾರ ನೈಪುಣ್ಯತೆ ತೋರಿದ್ದಾರೆ ಎಂದು ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಹೇಳಿದ್ದಾರೆ.

ದೆಹಲಿ ಸಿಎಂ ವ್ಯವಹಾರ ನೈಪುಣ್ಯತೆ ತೋರಿದ್ದಾರೆ: ಕೇಜ್ರಿವಾಲ್ ಬೆನ್ನಿಗೆ ನಿಂತ ಬಿಜೆಪಿ ಮುಖಂಡ ಸಿನ್ಹಾ
ಸಂಗ್ರಹ ಚಿತ್ರ
Published On :
ನವದೆಹಲಿ: ಆಡಳಿತ ವಿಚಾರದಲ್ಲಿ ದೆಹಲಿ ಸಿಎಂ ಅರವಿಂಜ್ ಕೇಜ್ರಿವಾಲ್ ವ್ಯವಹಾರ ನೈಪುಣ್ಯತೆ ತೋರಿದ್ದಾರೆ ಎಂದು ಬಿಜೆಪಿ ಮುಖಂಡ ಶತೃಘ್ನ ಸಿನ್ಹಾ ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶತೃಘ್ನ ಸಿನ್ಹಾ ಅವರು, ಆಪ್ ಸರ್ಕಾರ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರ ನಡುವಿನ ಸಮಸ್ಯೆ ಕುರಿತು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ನೇಹಿತ, ಡೈನಾಮಿಕ್ ಹೀರೋ, ವ್ಯಾಪಕ ಚರ್ಚೆಗೀಡಾಗುತ್ತಿರುವ ದೆಹಸಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಲೆಫ್ಟಿನೆಂಟ್ ಗವರ್ನರ್ ರೊಂದಿಗಿನ ವಿಚಾರದಲ್ಲಿ ವ್ಯವಹಾರ ನೈಪುಣ್ಯತೆ ತೋರಿದ್ದಾರೆ. ಅಲ್ಲದೆ ಅಧಿಕಾರಿಗಳು ಮತ್ತೆ ಕರ್ತವ್ಯ ನಿರ್ವಹಣೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಐಎಎಸ್ ಅಧಿಕಾರಿಗಳ ಪ್ರತಿಭಟನೆ ವಾಪಸ್ ಆಗಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಅಂತೆಯೇ ಐಎಎಸ್ ಅಧಿಕಾರಿಗಳ ಪ್ರತಿಭಟನೆ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡುತ್ತಾರೆ ಎಂದು ಭಾವಿಸುತ್ತೇನೆ. ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಿದ್ದೇ ಆದರೆ ದೊಡ್ಡ ಬದಲಾವಣೆಗೆ ಪ್ರಧಾನಿ ನಾಂದಿ ಹಾಜಿದಂತಾಗುತ್ತದೆ ಎಂದು ಶತೃಘ್ನ ಸಿನ್ಹಾ ಹೇಳಿದ್ದಾರೆ.
ಇನ್ನು 2015ರ ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯಿಂದ ಶತೃಘ್ನ ಸಿನ್ಹಾ ದೂರು ಉಳಿದಿದ್ದರು. ಬಿಹಾರ ಚುನಾವಣೆಯಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿತ್ತು ಎಂದು ಸಿನ್ಹಾ ಆರೋಪಿಸಿದ್ದರು. ಅಂದಿನಿಂದ ಶತೃಘ್ನ ಸಿನ್ಹಾ ನಿಯಮಿತವಾಗಿ ಕೇಂದ್ರಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.