ದೇಶ

ಐಎಎಸ್ ಅಧಿಕಾರಿಗಳ 'ಮುಷ್ಕರ'ದ ಮೂಲಕ ದೆಹಲಿಯಲ್ಲಿ ವಸ್ತುತಃ ರಾಷ್ಟ್ರಪತಿ ಆಡಳಿತ: ಕೇಜ್ರಿವಾಲ್

ಆಮ್ ಆದ್ಮಿ ಸರ್ಕಾರ ಆಡಳಿತ ನಡೆಸುತ್ತಿರುವ ದೆಹಲಿಯಲ್ಲಿ ಐಎಎಸ್ ಅಧಿಕಾರಿಗಳ ಮುಷ್ಕರದಿಂದಾಗಿ ವಸ್ತುತಃ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ....

ಐಎಎಸ್ ಅಧಿಕಾರಿಗಳ 'ಮುಷ್ಕರ'ದ ಮೂಲಕ ದೆಹಲಿಯಲ್ಲಿ ವಸ್ತುತಃ ರಾಷ್ಟ್ರಪತಿ ಆಡಳಿತ: ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Published On :
ನವದೆಹಲಿ: ಆಮ್ ಆದ್ಮಿ ಸರ್ಕಾರ ಆಡಳಿತ ನಡೆಸುತ್ತಿರುವ ದೆಹಲಿಯಲ್ಲಿ  ಐಎಎಸ್ ಅಧಿಕಾರಿಗಳ ಮುಷ್ಕರದಿಂದಾಗಿ  ವಸ್ತುತಃ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಛೇರಿಯಲ್ಲಿ ತಮ್ಮ ಮೂವರು ಕ್ಯಾಬಿನೆಟ್ ಸಚಿವರೊಡನೆ ಧರಣಿ ನಡೆಸಿರುವ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ವಿರುದ್ಧ ಆರನೇ ದಿನದ ಧರಣಿ ಮುಂದುವರಿಸಿದ್ದಾರೆ.
ಕೇಜ್ರಿವಾಲ್ ಜತೆಗೆ ದೆಹಲಿಯ ಉಪ ಮುಖ್ಯಮಂತ್ರಿ  ಮನೀಷ್ ಸಿಸೋಡಿಯಾ ಮತ್ತು ಮಂತ್ರಿಗಳಾದ ಸತ್ಯೇಂದರ್ಜೈನ್ ಮತ್ತು ಗೋಪಾಲ್ ರೈ ಸಹ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಲೆ. ಗವರ್ನರ್ ತಾವು  ಐಎಎಸ್ ಅಧಿಕಾರಿಗಳು ತಮ್ಮ "ಮುಷ್ಕರ" ವನ್ನು ಅಂತ್ಯಗೊಳಿಸಲು ಆದೇಶಿಸಬೇಕು, ಮನೆಬಾಗಿಲಿಗೆ ಪಡಿತರ ವ್ಯವಸ್ಥೆ ಜಾರಿಗೆ ಅವಕಾಶ ನೀಡಬೇಕೆಂದು ಅವರು ಬೇಡಿಕೆ ಇಟ್ಟಿದ್ದಾರೆ.
ಐಎಎಸ್ ಅಧಿಕಾರಿಗಳು ಕೆಲಸದಿಂದ ಹಿಂದೆ ಸರಿದು ಪ್ರತಿಭಟನೆ ನಡೆಸುತ್ತಿರುವ ಸಂಬಂಧ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ "ಐಎಎಸ್ ಅಧಿಕಾರಿಗಳ ’ಮುಷ್ಕರ’ದ ಕಾರಣ ದೆಹಲಿಯಲ್ಲಿ ವಸ್ತುತಃ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ ಎಂದು ನಾನು ಒಪ್ಪುತ್ತೇನೆ" ಎಂದಿದ್ದಾರೆ.
ಜೈನ್ ಹಾಗೂ ಸಿಸೋಡಿಯಾ ಅನುಕ್ರಮವಾಗಿ ಮಂಗಳವಾರ ಮತ್ತು ಬುಧವಾರದಿಂದ ಎಲ್-ಜಿ ಕಛೇರಿಯ ವೇಟಿಂಗ್ ರೂಮಿನಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ ಅಧಿಕಾರಿಗಳ ಮುಷ್ಕರ ಸಂಬಂಧ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.