ದೇಶ

ಪ್ರಣಬ್ ಮುಖರ್ಜಿ ಫೇಕ್ ಫೋಟೋ ವಿರುದ್ಧ ಒಂದಾದ ಆರ್ ಎಸ್ಎಸ್, ಕಾಂಗ್ರೆಸ್

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಫೇಕ್ ಫೋಟೋ ವಿರುದ್ಧ ಕಾಂಗ್ರೆಸ್ ಮತ್ತು ಆರ್ ಎಸ್ಎಸ್ ಒಂದಾಗಿದ್ದು...

ಪ್ರಣಬ್ ಮುಖರ್ಜಿ ಫೇಕ್ ಫೋಟೋ ವಿರುದ್ಧ ಒಂದಾದ ಆರ್ ಎಸ್ಎಸ್, ಕಾಂಗ್ರೆಸ್
ಪ್ರಣಬ್ ಮುಖರ್ಜಿ
Published On :
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಫೇಕ್ ಫೋಟೋ ವಿರುದ್ಧ ಕಾಂಗ್ರೆಸ್ ಮತ್ತು ಆರ್ ಎಸ್ಎಸ್ ಒಂದಾಗಿದ್ದು, ವೈರಲ್ ಆಗಿದ್ದ ಮಾಜಿ ರಾಷ್ಟ್ರಪತಿಯ ಆರ್ ಎಸ್ ಎಸ್ ಸಲ್ಯೂಟ್ ಚಿತ್ರವನ್ನು ಖಂಡಿಸಿದ್ದಾರೆ.
ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್ ಪ್ರಣಬ್ ಮುಖರ್ಜಿ ಫೇಕ್ ಫೋಟೋ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ ನಕಲಿ ಫೋಟೋ ಖಂಡಿಸಿ ಆರ್ ಎಸ್ ಎಸ್ ಉಪ ಮುಖ್ಯಸ್ಥ ಮನಮೋಹನ್ ವೈದ್ಯ ಅವರು ಪ್ರಕಟಣೆ ನೀಡಿದ್ದು, ಕೆಲವು ವಿಭಜನಾತ್ಮಕ ರಾಜಕೀಯ ಶಕ್ತಿಗಳು ಭಾರತದ ಮಾಜಿ ಮಾಜಿ ರಾಷ್ಟ್ರಪತಿಯ ಫೋಟೋವನ್ನು ತಿರುಚಿ ಪೋಸ್ಟ್ ಮಾಡಿವೆ ಎಂದು ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರು ನಿನ್ನೆ ನಾಗಪುರದಲ್ಲಿ ನಡೆದ ಆರ್ ಎಸ್ ಎಸ್ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ವೇಳೆ ಪ್ರಣಬ್‌ ಮುಖರ್ಜಿ ಆರ್‌ಎಸ್‌ಎಸ್‌ ಸ್ವಯಂಸೇವಕರು ಧರಿಸುವ ಕಪ್ಪು ಟೋಪಿ ಧರಿಸಿ, ಸ್ವಯಂಸೇವಕರ ಶೈಲಿಯಲ್ಲಿಯೇ ಸಂಘಗೀತೆಗೆ ನಮಿಸಿದ್ದರು ಎನ್ನಲಾದ ಫೋಟೋ ಒಂದು ವೈರಲ್ ಆಗಿತ್ತು. ಆ ಫೋಟೋ ತಿರುಚಲಾಗಿದ್ದು, ಅದು ನಕಲಿ ಮತ್ತು ಮೂಲ ಫೋಟೋದಲ್ಲಿ ಪ್ರಣಬ್ ಮುಖರ್ಜಿ ಆರ್ ಎಸ್‌ಎಸ್‌ ಟೋಪಿ ಧರಿಸಿರಲಿಲ್ಲ ಮತ್ತು ಧ್ವಜವಂದನೆ ಕೂಡ ಸಲ್ಲಿಸಿರಲಿಲ್ಲ. 
ಆರ್‌ಎಸ್‌ಎಸ್‌ ಶೈಲಿಯಲ್ಲಿಯೇ ನಿಂತಿದ್ದ ಪ್ರಣಬ್ ಫೋಟೋ ಕಾರ್ಯಕ್ರಮ ಮುಗಿಯುತ್ತಲೇ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.