ಪ್ರಣಬ್ ಮುಖರ್ಜಿ ಭಾಷಣ ಭಾರತದ ವೈಭವೋಪೇತ ಇತಿಹಾಸವನ್ನು ನೆನಪಿಸಿತು: ಆರ್ ಎಸ್ ಎಸ್
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣ ಭಾರತದ ವೈಭವೋಪೇತ ಇತಿಹಾಸವನ್ನು ನೆನಪಿಸಿತು ಎಂದು ಆರ್ ಎಸ್ ಎಸ್ ಹೇಳಿದೆ.

Published On :
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭಾಷಣ ಭಾರತದ ವೈಭವೋಪೇತ ಇತಿಹಾಸವನ್ನು ನೆನಪಿಸಿತು ಎಂದು ಆರ್ ಎಸ್ ಎಸ್ ಹೇಳಿದೆ.
ನಿನ್ನೆ ನಾಗಪುರದ ಆರ್ ಎಸ್ ಎಸ್ ಪ್ರಧಾನ ಕಚೇರಿಲ್ಲಿ ನಡೆದ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಭಾಷಣ ಮಾಡಿದ್ದರು. ಈ ಭಾಷಣಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಕ್ರಿಯೆ ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆ, ಪ್ರಣಬ್ ಮುಖರ್ಜಿ ಅವರ ಭಾಷಣ ಭಾರತದ ವೈಭವೋಪೇತ ಇತಿಹಾಸವನ್ನು ನೆನಪಿಸಿದ್ದು, ದೇಶದ ಅಂತರ್ಗತತೆ, ಬಹುಸಂಖ್ಯಾತತೆ ಮತ್ತು ವೈವಿಧ್ಯತೆಯ ಏಕತೆಯು ಭಾರತದ ಅಡಿಪಾಯವಾಗಿದೆ ಎಂಬುದನ್ನು ಪ್ರಣಬ್ ಒತ್ತಿ ಹೇಳಿದ್ದಾರೆ ಎಂದು ಆರ್ ಎಸ್ ಎಸ್ ಹೇಳಿದೆ.
ಈ ಬಗ್ಗೆ ಮಾತನಾಡಿರುವ ಆರ್ ಎಸ್ ಎಸ್ ಪ್ರಚಾರ ವಿಭಾಗ ಮುಖ್ಯಸ್ಥ ಅರುಣ್ ಕುಮಾರ್ ಅವರು, ಭಾರತ ಐದು ಸಾವಿರ ವರ್ಷಗಳ ವೈಭವೋಪೇತ ಇತಿಹಾಸವನ್ನು ಹೊಂದಿದೆ. ನಮ್ಮ ವ್ಯವಸ್ಥೆ ಬದಲಾಗಿರಬಹುದು. ಆದರೆ ನಮ್ಮ ಮೌಲ್ಯಗಳು ಮತ್ತು ತತ್ವಾದರ್ಶಗಳು ಬದಲಾಗಿಲ್ಲ. ಪ್ರಣಬ್ ಮುಖರ್ಜಿ ಅವರು, ದೇಶದ ಅಂತರ್ಗತತೆ, ಬಹುಸಂಖ್ಯಾತತೆ ಮತ್ತು ವೈವಿಧ್ಯತೆಯ ಏಕತೆಯು ಭಾರತದ ಅಡಿಪಾಯವಾಗಿದೆ ಎಂಬುದನ್ನು ಪ್ರಣಬ್ ಒತ್ತಿ ಹೇಳಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಇಲ್ಲಿಗೆ ಬಂದು ನಮ್ಮ ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಮಗೆ ಸಂತಸ ತಂದಿದೆ. ದೇಶದ ಐಕ್ಯತೆ ಕುರಿತು ಪ್ರಣಬ್ ಮುಖರ್ಜಿ ಮಾತನಾಡಿದ್ದಾರೆ. ಅವರಿಗೆ ನಾನು ಈ ಮೂಲಕ ಧನ್ಯವಾದ ಹೇಳಲಿಚ್ಛಿಸುತ್ತೇನೆ ಎಂದು ಅರುಣ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiPranab Mukherjeeಪ್ರಣಬ್ ಮುಖರ್ಜಿRSSTwitterಟ್ವಿಟರ್ಆರ್ ಎಸ್ ಎಸ್ಶರ್ಮಿಷ್ಟಾ ಮುಖರ್ಜಿSharmistha Mukherjee
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


