ವಿದ್ಯುತ್ ಬಿಲ್ ಬಾಕಿ ಕೇಳಿದ ಸರ್ಕಾರಿ ನೌಕರನಿಗೆ ಬಿಜೆಪಿ ಮುಖಂಡನಿಂದ ಥಳಿತ, ವೈರಲ್ ವೀಡಿಯೋ
ರಾಜ್ಯ ವಿದ್ಯುತ್ ಇಲಾಖೆ ನೌಕರನೊಬ್ಬನಿಗೆ ಮಧ್ಯ ಪ್ರದೇಶದ ಭಾರತೀಯ ಜನತಾ ಪಕ್ಷದ ನಾಯಕ ಜಗನ್ನಾಥ್ ಸಿಂಗ್ ರಘುವಂಶಿ ಥಳಿಸಿರುವ ವೀಡುಇಯೋ ....

Published On :
ಇಸಾಘರ್(ಮಧ್ಯ ಪ್ರದೇಶ): ರಾಜ್ಯ ವಿದ್ಯುತ್ ಇಲಾಖೆ ನೌಕರನೊಬ್ಬನಿಗೆ ಮಧ್ಯ ಪ್ರದೇಶದ ಭಾರತೀಯ ಜನತಾ ಪಕ್ಷದ ನಾಯಕ ಜಗನ್ನಾಥ್ ಸಿಂಗ್ ರಘುವಂಶಿ ಥಳಿಸಿರುವ ವೀಡುಇಯೋ ದೃಶ್ಯವೊಂದು ಮಾದ್ಯಮದಲ್ಲಿ ಹರಿದಾಡುತ್ತಿದೆ.
ದೃಶ್ಯದಲ್ಲಿ ಬಿಜೆಪಿ ನಾಯಕ ರಘುವಂಶಿ ತನ್ನ ಬೂಟುಗಾಲಿನಿಂದ ನೌಕರನ ಮೇಲೆ ಹಲ್ಲೆ ನಾಡೆಸಿದ್ದನ್ನು ಕಾಣಬಹುದಾಗಿದೆ.
"ನೀನು ನನ್ನ ಕರುಣೆಯಿಂದಾಗಿ ಉಳಿದಿದ್ದಿ, ಇಲ್ಲವಾದಲ್ಲಿ ನಿನ್ನ ಮುಖವನ್ನೇ ಕಪ್ಪಾಗಿಸುತ್ತಿದ್ದೆ" ಸರ್ಕಾರಿ ನೌಕರನಿಗೆ ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿದೆ.
ರಘುವಂಶಿ 4ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಇಲಾಖೆಯ ನೌಕರ ಆ ಬಿಲ್ ವಿಚಾರ ಪ್ರಶ್ನಿಸಿದ್ದಾಗ ಅವನನ್ನು ಥಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿMadhya Pradeshgovernment employeeಮಧ್ಯಪ್ರದೇಶJagannath Singh Raghuvanshiಜಗನ್ನಾಥ್ ಸಿಂಗ್ ರಘುವಂಶಿಸರ್ಕಾರಿ ಉದ್ಯೋಗಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


