ರೂ.1 ಲಕ್ಷ ಲಂಚ ಪಡೆದು ಕೈದಿಯ ಬರ್ತ್'ಡೇ ಆಚರಿಸಿದ ಜೈಲು ಅಧಿಕಾರಿಗಳು: ವಿಡಿಯೋ ವೈರಲ್
ಕೈದಿಯೊಬ್ಬನಿಂದ ರೂ.1 ಲಕ್ಷ ಪಡೆದ ಜೈಲಿನ ಅಧಿಕಾರಿಗಳು, ಆತನ ಹುಟ್ಟುಹಬ್ಬವನ್ನು ಆಚರಿಸಿರುವ ಆರೋಪವೊಂದು ಉತ್ತರಪ್ರದೇಶದ ಫೈಜಾಬಾದ್ ಜೈಲಿನ ವಿರುದ್ಧ ಕೇಳಿ ಬಂದಿದೆ...

Published On :
ಫೈಜಾಬಾದ್: ಕೈದಿಯೊಬ್ಬನಿಂದ ರೂ.1 ಲಕ್ಷ ಪಡೆದ ಜೈಲಿನ ಅಧಿಕಾರಿಗಳು, ಆತನ ಹುಟ್ಟುಹಬ್ಬವನ್ನು ಆಚರಿಸಿರುವ ಆರೋಪವೊಂದು ಉತ್ತರಪ್ರದೇಶದ ಫೈಜಾಬಾದ್ ಜೈಲಿನ ವಿರುದ್ಧ ಕೇಳಿ ಬಂದಿದೆ.
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವೇಂದ್ರ ಸಿಂಗ್ ಫೈಜಾಬಾದ್ ಜೈಲಿನಲ್ಲಿದ್ದು. ಜು.23 ರಂದು ಈತನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.
ವಿಚಾರಣೆ ಹಿನ್ನಲೆಯಲ್ಲಿ ಶಿವೇಂದ್ರ ಅವರನ್ನು ಇಂದು ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜೈಲರ್ ವಿನಯ್ ಕುಮಾರ್ ಅವರೇ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ಮಾಡಿದ್ದರು. ಇದಕ್ಕಾಗಿ ಜೈಲು ಸಿಬ್ಬಂದಿಗೆ ರೂ.1 ಲಕ್ಷ ಹಣ ನೀಡಲಾಗಿತ್ತು ಎಂದು ಆರೋಪಿಸಿದ್ದಾನೆ.
ಎಲ್ಲವೂ ಆಗಿದ್ದು ಜೈಲರ್ ವಿನಯ್ ಕುಮಾರ್ ಅವರಿಂದ. ವಿನಯ್ ಅವರ ಸಿಬ್ಬಂದಿ ವಿಡಿಯೋ ಮಾಡಿ ಇದನ್ನು ಬಹಿರಂಗ ಪಡಿಸುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಇದೀಗ ವಿಡಿಯೋ ಲೀಕ್ ಆಗಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನನ್ನ ಬಳಿಯಿದ್ದ ಎಲ್ಲಾ ವಸ್ತುಗಳನ್ನು ಜೈಲು ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು ಶಿವೇಂದ್ರ ಸಿಂಗ್ ಹೇಳಿದ್ದಾನೆ.
ಘಟನೆ ಕುರಿತಂತೆ ವಕೀಲ ಮರ್ತಾಂಡ್ ಪ್ರಸಾದ್ ಸಿಂಗ್ ಅವರು ಮಾತನಾಡಿ, ಹುಟ್ಟುಹಬ್ಬ ಆಚರಣೆ ನಡೆದಿರುವುದು ನಿಜ. ಜೈಲಿನ ಹೊರಾಂಗಣದಲ್ಲಿ ಆಚರಣೆ ನಡೆದಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
prisonerUttar pradeshಕೈದಿಉತ್ತರಪ್ರದೇಶBirthday Celebrationಹುಟ್ಟುಹಬ್ಬ ಆಚರಣೆUttar Pradesh prisonerShivendra Singhಉತ್ತರಪ್ರದೇಶ ಜೈಲುಶಿವೇಂದ್ರ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


