ದೇಶ

ತೃತೀಯ ಲಿಂಗಿಗಳನ್ನು 'ಇತರ'ರು’ ಎಂದು ಕರೆದದ್ದಕ್ಕಾಗಿ ಮೇನಕಾ ಗಾಂಧಿ ಕ್ಷಮೆ ಯಾಚನೆ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಮನೇಕಾ ಗಾಂಧಿ ತಾವು ತೃತೀಲ ಲಿಂಗಿಗಳಿಗೆ ’ಇತರರು’ ಎಂದು ತಪ್ಪಾಗಿ ಪದ ಬಳಕೆ ಮಾಡಿದುದಕ್ಕೆ ಲೋಕಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ

ತೃತೀಯ ಲಿಂಗಿಗಳನ್ನು 'ಇತರ'ರು’ ಎಂದು ಕರೆದದ್ದಕ್ಕಾಗಿ ಮೇನಕಾ ಗಾಂಧಿ ಕ್ಷಮೆ ಯಾಚನೆ
ಮೇನಕಾ ಗಾಂಧಿ
Published On :
ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ  ಮನೇಕಾ ಗಾಂಧಿ ತಾವು ತೃತೀಲ ಲಿಂಗಿಗಳಿಗೆ ’ಇತರರು’ ಎಂದು ತಪ್ಪಾಗಿ ಪದ ಬಳಕೆ ಮಾಡಿದುದಕ್ಕೆ ಲೋಕಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ. "ನಾನು ಉದ್ದೇಶಪೂರ್ವಕವಾಗಿ ಹೇಳಿಲ್ಲ, ನನ್ನ ಅಜ್ಞಾನದ ಕಾರಣ ಈ ತಪ್ಪು ಸಂಭವಿಸಿದೆ ಎಂದು ಅವರು ಹೇಳಿದರು.
ಶಾಲಾ ಪಠ್ಯಪುಸ್ತಕಗಳಲ್ಲಿ ಮಾನವ ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ಸೇರಿಸುವುದರ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ ಮೇನಕಾ ಗಾಂಧಿ ತಾವು ತೃತೀಯ ಲಿಂಗಿಗಳನ್ನು ’ಇತರರು’ ಎಂದು ಸಂಬೋಧಿಸಿದ್ದರು. 
ಇದಕ್ಕೂ ಮುನ್ನ ನ್ಯಾಷನಲ್ ಅಲೆಯನ್ಸ್ ಫಾರ್ ಪೀಪಲ್ಸ್ ಮೂಮೆಂಟ್ ಆಂಡ್ ಟ್ರಾನ್ಸ್ ವುಮನ್ ಸಂಘಟನೆಯ ಸದಸ್ಯೆ ಮೇರಾ ಸಂಘಮಿತ್ರ  ಸೇರಿ ಅನೆಕ ಸಂಸದರು ಮೇನಕಾ ಅವರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.
"ಇತರರು ಎಂದು ಪದ ಬಳಕೆ ಮಾಡಿದುದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಮಾನವ ಕಳ್ಳ ಸಾಗಣೆ ತಡೆಗಟ್ಟುವಿಕೆ ವಿಧೇಯಕ ಕುರಿತ ಚರ್ಚೆ ಸಮಯದಲ್ಲಿ ನಾನುಈ ಪದ ಬಳಸಿದ್ದಕ್ಕಾಗಿ  ನಾನು ಕ್ಷಮೆ ಬೇಡುತ್ತೇನೆ. ಆದರೆ ಈ ಸಮುದಾಯಕ್ಕೆ ಅಧಿಕೃತವಾಗಿ ಏನೆನ್ನುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಭವಿಷ್ಯದಲ್ಲಿ ನಾನು ಈ ಸಮುದಾಯಕ್ಕಾಗಿರುವ ಅಧಿಕೃತ ಪದವನ್ನು ಉಲ್ಲೇಖಿಸಿ ಅವರನ್ನು ಹೆಸರಿಸುತ್ತೇನೆ" ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.