ದೇಶ

ಆಧಾರ್ ಗೆ ಜೋಡಣೆಯಾಗಿರುವ ಡಾಟಾ ದುರ್ಬಳಕೆ ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ

ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ದೇಶಾದ್ಯಂತ

ಆಧಾರ್ ಗೆ ಜೋಡಣೆಯಾಗಿರುವ ಡಾಟಾ ದುರ್ಬಳಕೆ ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ
ಆಧಾರ್ ಗೆ ಜೋಡಣೆಯಾಗಿರುವ ಡಾಟಾ ದುರ್ಬಳಕೆ ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ
Published On :
ಚೆನ್ನೈ: ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್. 
ಈ ಘಟನೆ ನಡೆದಾಗಿನಿಂದಲೂ ನಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆಯೇ ಎಂಬ ಆತಂತ ಜನಸಾಮಾನ್ಯರಲ್ಲಿ ಕಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಾರ್ವನಿಕರಿಗಾಗಿಯೇ ಸೌಲಭ್ಯವೊಂದನ್ನು ಪ್ರಾರಂಭಿಸಿದ್ದು, ಡಾಟಾ ದುರ್ಬಳಕೆಯನ್ನು ಸುಲಭವಾಗಿ ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿ ಇದೆ. 
ಆಧಾರ್ ವೆಬ್ ಸೈಟ್ ನಲ್ಲಿ ಆಧಾರ್ ದೃಢೀಕರಣ ಹಿಸ್ಟರಿ (Aadhaar authentication history) ಆಯ್ಕೆಯ ಮೂಲಕ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ನಿಗಾ ವಹಿಸಬಹುದಾಗಿದೆ. ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ನ್ನು ಬಳಕೆ ಮಾಡಿರುವ ಅಂಕಿ-ಅಂಶಗಳನ್ನು ಸಂಪೂರ್ಣವಾಗಿ ಯುಐಡಿಎಐ ನೋಂದಣಿ ಮಾಡಿಕೊಳ್ಳುತ್ತದೆ.  
ಬಳಕೆದಾರರ ಮೊಬೈಲ್ ಗೆ ಒಪಿಟಿ ಪರಿಶೀಲನೆಗೊಂಡ ನಂತರವಷ್ಟೇ ಆಧಾರ್ ಹಿಸ್ಟರಿಯನ್ನು ನೋಡಬಹುದಾಗಿದ್ದು, ಯಾವುದೇ ಸಮಯದಲ್ಲಿ ಅನಪೇಕ್ಷಿತ ಆಧಾರ್ ದೃಢೀಕರಣಕ್ಕೆ ಮನವಿ ಬಂದಿದೆಯೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ. ಆದರೆ ಕೇವಲ 6 ತಿಂಗಳ ಅವಧಿಯ ಅಂಕಿ-ಅಂಶಗಳು ಮಾತ್ರ ಇದರಲ್ಲಿ ಲಭ್ಯವಿರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.