ದೇಶ

ಎನ್ಆರ್​ಸಿ ಗೊಂದಲ ನಿವಾರಣೆಗೆ ಸರ್ವಪಕ್ಷ ಸಭೆ ಕರೆಯಲು ಕಾಂಗ್ರೆಸ್ ಆಗ್ರಹ

ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ (ಎನ್ಆರ್​ಸಿ) ಕುರಿತಂತೆ ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು.

ಎನ್ಆರ್​ಸಿ  ಗೊಂದಲ ನಿವಾರಣೆಗೆ ಸರ್ವಪಕ್ಷ ಸಭೆ ಕರೆಯಲು ಕಾಂಗ್ರೆಸ್ ಆಗ್ರಹ
ಸಂಗ್ರಹ ಚಿತ್ರ
Published On :
ನವದೆಹಲಿ: ಅಸ್ಸಾಂ ನಾಗರಿಕ ರಾಷ್ಟ್ರೀಯ ನೊಂದಣಿ (ಎನ್ಆರ್​ಸಿ) ಕುರಿತಂತೆ ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು.ಯಾವ ಕಾರನಕ್ಕೂ ಒಬ್ಬ ಬಾರತೀಯ ನಾಗರಿಕನನ್ನೂ ಲೆಕ್ಕದಿಂದ ಹೊರಗಿಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕೆಂದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.
ಈ ವಿಷಯದ ಬಗ್ಗೆ ಯಾವುದೇ ರಾಜಕೀಯ ಬೇಡ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ  ಆನಂದ್ ಶರ್ಮಾ ಹೇಳಿದ್ದಾರೆ.
"ಕೇಂದ್ರವು ಸರ್ವಪಕ್ಷಗಳ ನಾಯಕರ ಸಭೆ ಕರೆಯಬೇಕು.ಹಾಗೆಯೇ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗೆಗೆ ಸಭಗೆ ಮಾಹಿತಿ ನೀಡಬೇಕುಎಂದು ಅವರು ಹೇಳಿದರು. ನಾಳೆಯೇ ಸಭೆ ನಡೆದರೆ ಅದು ಸೂಕ್ತವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎನ್ಆರ್​ಸಿ ಗೆ ಸಂಬಂಧಿಸಿ ಎಲ್ಲಾ ವಿಷಗಳು ಗೊಂದಲಮುಕ್ತವಾಗುವವಎಗೆ ಯಾವೊಬ್ಬ ಪ್ರಜೆ ಅಥವಾ ಕುಟುಂಬ ಬೇರೆ ಹೋಗಬಾರದು ಎಂದು ಅವರು ಅಭಿಪ್ರಾಯಪಟ್ಟರು.ಎನ್ಆರ್​ಸಿ ವಿಂಗಡನೆಯು ಅಂತರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದ್ದು  ಬಾಂಗ್ಲಾದೇಶವನ್ನು ಒಳಗೊಂಡಂತೆ ನೆರೆಯ ದೇಶಗಳೊಂದಿಗೆ ಇದು ಸಂಬಂಧ ಹೊಂದಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಗಳಾಗುತ್ತದೆ.
ಎನ್ಆರ್​ಸಿ ಅಂತಿಮ ವರದಿ ರೂಪಿಸುವಾಗ ಅನುಸರಿಸಿದ ವಿಧಾನದ ಬಗೆಗೆ ಪ್ರಶ್ನೆಗಳಿವೆ.ಒಟ್ಟಾರೆ ಪ್ರಕ್ರಿಯೆಯೆ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳು ಎದ್ದಿದೆ. ಹೀಗಾಗಿ ಸರ್ಕಾರ ಪ್ರಕ್ರಿಯೆಯಲ್ಲಿನ ಎಲ್ಲಾ ಬಗೆಯ ನ್ಯೂನತೆಯನ್ನು ಪರಿಹರಿಸಬೇಕು. ಈ ಹಿಂದೆ ರಾಜೀವ್ ಗಾಂಧಿ ಅವರ ಕಾಲದಲ್ಲಿ ನಡೆದಿದ್ದ 1985 ರ ಅಸ್ಸಾಂ ಒಪ್ಪಂದವು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂತ್ರವಾಗಿದೆ. ಹೀಗಾಗಿ ಇದನ್ನೇ ಮಾನದಂಡವಾಗಿರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.