ಗುರುಪೂರ್ಣಿಮೆಯಂದು 'ಯೋಗಿ’' ಕಾಲಿಗೆರಗಿ ಆಶೀರ್ವಾದ ಪಡೆದ ಪೋಲೀಸ್ ಅಧಿಕಾರಿ: ಫೋಟೋ ವೈರಲ್
ಗುರುಪೂರ್ಣಿಮಾ ವಿಶೇಷ ದಿನದ ಪ್ರಯುಕ್ತ ಉತ್ತರ ಪ್ರದೇಶದ ಗೋರಖ್ ಪುರದ ಗೋರಖನಾಥ ದೇವಸ್ಥಾನದಲ್ಲಿ ನಡೆದ ಪೂಜೆಯ ಸಮಯ ಸಮವಸ್ತ್ರಧಾರಿಯಾಗಿದ್ದ.....

Published On :
ಗೋರಖ್ ಪುರ (ಉತ್ತರ ಪ್ರದೇಶ): ಗುರುಪೂರ್ಣಿಮಾ ವಿಶೇಷ ದಿನದ ಪ್ರಯುಕ್ತ ಉತ್ತರ ಪ್ರದೇಶದ ಗೋರಖ್ ಪುರದ ಗೋರಖನಾಥ ದೇವಸ್ಥಾನದಲ್ಲಿ ನಡೆದ ಪೂಜೆಯ ಸಮಯ ಸಮವಸ್ತ್ರಧಾರಿಯಾಗಿದ್ದ ಪೋಲೀಸ್ ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.
ಮುಖ್ಯಮಂತ್ರಿ ಯೋಗುಇ ಎದುರು ಮಂಡಿಯೂರಿ ಆಶೀರ್ವಾದ ಬೇಡುತ್ತಿರುವ ಪೋಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಚಿತ್ರ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಯೋಗಿ ಆದಿತ್ಯನಾಥ್ ಗೋರಖ್ ಪುರ ಗೋರಖನಾಥ ಮಠದ ಪೀಠಾಧ್ಯಕ್ಷ ಹಾಗು ಮುಖ್ಯ ಅರ್ಚಕರೆನ್ನುವುದು ಗಮನಾರ್ಹ.
ಈ ಸಂಬಂಧ ಉತ್ತರ ಪ್ರದೇಶ ಪೋಲೀಸ್ ಇಲಾಖೆ ಪ್ರವೀಣ್ ಸಿಂಗ್ ನಿಲುವಿನ ಸ್ಪಷ್ಟೀಕರಣ ಕೇಳಿದ್ದು ಇದಕ್ಕೆ ಉತ್ತರಿಸಿರುವ ಅಧಿಕಾರಿ "ನಾನು ಗೋರಖನಾಥ ದೇವಸ್ಥಾನದ ಭದ್ರತಾ ನಿರ್ವಹಣೆಗಾಗಿ ನಿಯೋಜಿತನಾಗಿದ್ದೆ. ಒಮ್ಮೆ ಕರ್ತವ್ಯ ಮುಗಿದ ಬಳಿಕ ಪೋಲೀಸ್ ಕ್ಯಾಪ್, ಬೆಲ್ಟ್ ಹಾಗೂ ಇತರೆ ಗೌರವಯುತ ಚಿನ್ಹೆಗಳನ್ನು ತೆಗೆದಿಟ್ಟು ತಲೆಗೆ ಟವೆಲ್ ಅನ್ನು ರುಮಾಲಿನಂತೆ ಸುತ್ತಿ ಪೀಠಾಧ್ಯಕ್ಷರಾದ ಯೋಗಿ ಆದಿತ್ಯನಾಥರ ಆಶೀರ್ವಾದ ಪಡೆದಿದ್ದೇನೆ" ಎಂದಿದ್ದಾರೆ.
"ನನ್ನ ಶರ್ಟ್ ಬೆವರುದಿಂದ ಒದ್ದೆಯಾಗಿತ್ತು ಮತ್ತು ನನ್ನ ಕೆಲಸವನ್ನು ನಾನು ಕಡೆಗಣಿಸಲಿಲ್ಲ. ಮಹಂತರು ದಸರಾ ಹಾಗು ಗುರುಪೂರ್ಣಿಮಾ ಸಮಯದಲ್ಲಿ ದೇವಸ್ಥಾನದಲ್ಲಿರುತ್ತಾರೆ.ನಾನು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಮನೋಭಾವದೊಂದಿಗೆ ದೇಶಸೇವೆ ಸಲ್ಲಿಸಿದ್ದೇನೆ" ಅವರು ವಿವರಿಸಿದ್ದಾರೆ.
Is this allowed for men in Uniform?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


