ದೇಶ

ಮಾಲ್‌ನಲ್ಲಿ ಚಾಕಲೇಟ್ ಕದ್ದು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮಹಿಳಾ ಪೇದೆ, ಪತಿಗೆ ಹಿಗ್ಗಾಮುಗ್ಗಾ ಥಳಿತ!

ಕಳ್ಳರನ್ನು ಹಿಡಿಯುವ ಪೊಲೀಸರೇ ಕಳ್ಳತನಕ್ಕೆ ಇಳಿದರೆ ಗತಿಯೇನು. ತಮಿಳುನಾಡಿನ ಮಹಿಳಾ ಪೊಲೀಸ್ ಪೇದೆಯೊಬ್ಬರು ಸೂಪರ್ ಮಾರ್ಕೇಟ್ ನಲ್ಲಿ ಚಾಕಲೇಟ್ ಕದಿಯುತ್ತ ರೆಡ್‌ಹ್ಯಾಂಡ್‌...

ಮಾಲ್‌ನಲ್ಲಿ ಚಾಕಲೇಟ್ ಕದ್ದು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮಹಿಳಾ ಪೇದೆ, ಪತಿಗೆ ಹಿಗ್ಗಾಮುಗ್ಗಾ ಥಳಿತ!
ಮಹಿಳಾ ಪೇದೆ
Published On :
ಚೆನ್ನೈ: ಕಳ್ಳರನ್ನು ಹಿಡಿಯುವ ಪೊಲೀಸರೇ ಕಳ್ಳತನಕ್ಕೆ ಇಳಿದರೆ ಗತಿಯೇನು. ತಮಿಳುನಾಡಿನ ಮಹಿಳಾ ಪೊಲೀಸ್ ಪೇದೆಯೊಬ್ಬರು ಸೂಪರ್ ಮಾರ್ಕೇಟ್ ನಲ್ಲಿ ಚಾಕಲೇಟ್ ಕದಿಯುತ್ತ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. 
34 ವರ್ಷದ ಎಂ ನಂದಿನಿ ಎಂಬುವರು ಚಾಕಲೇಟ್ ಕದಿಯುತ್ತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದನ್ನು ನೋಡಿದ ಮಾಲೀಕ ತಕ್ಷಣ ಪೊಲೀಸ್ ಪೇದೆಯನ್ನು ವಿಚಾರಿಸಿದ್ದಾರೆ. ಇದರಿಂದ ಹೆದರಿದ ನಂದಿನಿ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾರೆ. ಆಗ ಆಕೆಯನ್ನು ಹಿಂಬಾಲಿಸಿದ ಸಿಬ್ಬಂದಿ ಹಿಡಿದು ತಂದಿದ್ದಾರೆ. 
ನಂತರ ಪೊಲೀಸ್ ದೂರು ನೀಡಬೇಡಿ ಎಂದು ಮಾಲೀಕರಲ್ಲಿ ಕ್ಷಮೆ ಕೋರಿ ಪತ್ರ ಬರೆದುಕೊಟ್ಟಿದ್ದಾರೆ. ಮನೆಗೆ ಮರಳಿದ ನಂತರ ಪತಿಗೆ ನಡೆದ ವಿಷಯವನ್ನು ತಿಳಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಮೂವರ ಜತೆ ಅಂಗಡಿಗೆ ಬಂದು ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಸಿಬ್ಬಂದಿ ಪತಿ ಹಾಗೂ ಮೂವರ ಮೇಲೆ ಹಲ್ಲೆ ನಡೆಸಿದ್ದರು. 
ಹಲ್ಲೆ ನಡೆದ ಬಳಿಕ ಮಾಲೀಕನಿಂದ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆ ಮಹಿಳಾ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತುಗೊಳಿಸಿ ಆಕೆಯ ಪತಿಯನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.