ಗೋರಕ್ಷಕರ ದಾಳಿ ತಡೆಯದಿದ್ದರೆ ಭಾರತ ಮತ್ತೆ ವಿಭಜನೆ: ಪಿಡಿಪಿ ನಾಯಕನ ಎಚ್ಚರಿಕೆ
ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ಮುಂದುವರೆಸಿದರು ಭಾರತ ಮತ್ತೆ ವಿಭಜನೆಯಾಗಲಿದೆ...

Published On :
ಶ್ರೀನಗರ: ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ಮುಂದುವರೆಸಿದರು ಭಾರತ ಮತ್ತೆ ವಿಭಜನೆಯಾಗಲಿದೆ ಎಂದು ಪಿಡಿಪಿಯ ಹಿರಿಯ ನಾಯಕ, ಸಂಸದ ಮುಜಾಫರ್ ಹುಸೇನ್ ಬೇಗ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ನಿತ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಬೇಕು ಎಂದಿರುವ ಬೇಗ್, ಈಗಾಗಲೇ ಭಾರತ 1947ರಲ್ಲಿ ಒಂದು ಬಾರಿ ವಿಭಜನೆಯಾಗಿದೆ. ಈಗ ಮುಸ್ಲಿಮರ ಹತ್ಯೆ ಮುಂದುವರೆದರೆ ಮತ್ತೊಂದು ವಿಭಜನೆ ಎದುರಾಗಲಿದೆ ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
1947ರಲ್ಲಿ ನಡೆದ ವಿಭಜನೆಯ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ತಡೆಯಬಹುದು ಬೇಗ್ ಹೇಳಿದ್ದಾರೆ.
ನಿನ್ನೆ ಪಿಡಿಪಿಯ 19ನೇ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ್ದ ಬೇಗ್, ಗೋವು, ಎಮ್ಮೆಗಳ ಹೆಸರಿನಲ್ಲಿ ಮುಸ್ಲಿಂರ ಹತ್ಯೆಗಳನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಫಲಿತಾಂಶ ಒಳ್ಳೇಯ ರೀತಿಯದ್ದಾಗಿರುವುದಿಲ್ಲ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


