ಪಶ್ಚಿಮ ಬಂಗಾಳ: ಯುವತಿಯ ದಿಕ್ಕು ದೆಸೆ ಬದಲಿಸಿದ ಪ್ರಧಾನಿ ಮೋದಿ ಆಟೋಗ್ರಾಫ್!
ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದ ಕೋಲ್ಕತ್ತಾದ ಯುವತಿಯೋರ್ವಳು ಇದೀಗ ಸೆಲಿಬ್ರಿಟಿಯಾಗಿಬಿಟ್ಟಿದ್ದಾಳೆ...

Published On :
ಬಂಕುರಾ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಟೋಗ್ರಾಫ್ ಪಡೆದ ಕೋಲ್ಕತ್ತಾದ ಯುವತಿಯೋರ್ವಳು ಇದೀಗ ಸೆಲಿಬ್ರಿಟಿಯಾಗಿಬಿಟ್ಟಿದ್ದಾಳೆ.
ಹೌದು ಜುಲೈ 16ರಂದು ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ನಡೆದಿದ್ದ ಭಾಷಣದ ವೇಳೆ ಹಾಕಿದ್ದ ಟೆಂಟ್ ಕುಸಿದು ಬಿದ್ದಿದ್ದು ಈ ವೇಳೆ ಮೋದಿ ಭಾಷಣ ಕೇಳಲು ಬಂದಿದ್ದ ಬಂಕುರಾ ನಿವಾಸಿ ರೀಟಾ ಮುಡಿ ಗಾಯಗೊಂಡಿದ್ದರು. ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾಗ ರೀಟಾ ಪ್ರಧಾನಿ ಮೋದಿಯಿಂದ ಆಟೋಗ್ರಾಫ್ ಪಡೆದಿದ್ದಳು. ಇದೇ ರೀಟಾಳನ್ನು ಸೆಲೆಬ್ರಿಟಿಯನ್ನಾಗಿ ಮಾಡಿದೆ.
ಹೌದು ರೀಟಾ ಮುಡಿಗೆ ನೂರಾರು ಯುವಕರು ಮದುವೆ ಪ್ರಸ್ತಾಪವನ್ನು ಮುಂದಿಡುತ್ತಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರ ಆಟೋಗ್ರಾಫ್ ನೋಡಲು ಜನ ಸಾಲುಗಟ್ಟಿ ರೀಟಾ ಮನೆಗೆ ಬರುತ್ತಿದ್ದಾರೆ.
ಕೇವಲ ಮನೆಗೆ ಮಾತ್ರ ಜನ ಬರುತ್ತಿಲ್ಲ. ಕಳೆದ 10 ದಿನಗಳಲ್ಲಿ ರೀಟಾಗೆ ಎರಡು ಮದುವೆ ಪ್ರಸ್ತಾಪಗಳು ಬಂದಿವೆ ಎಂದು ತಾಯಿ ಸಂಧ್ಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿbjpಬಿಜೆಪಿಪಶ್ಚಿಮ ಬಂಗಾಳWest Bengalmarriage proposalಮದುವೆ ಪ್ರಸ್ತಾಪAutographಆಟೋಗ್ರಾಫ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


