ದೇಶ

ತಾಜ್ ಮಹಲ್ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ತರಾಟೆ

ಯುನೆಸ್ಕೊ ವಿಶ್ವ ಪರಂಪರೆ ತಾಣವಾದ ತಾಜ್ ಮಹಲ್ ನ್ನು ಕಾಪಾಡುವಲ್ಲಿ ಉತ್ತರ ಪ್ರದೇಶ ಸರ್ಕಾರ ...

ತಾಜ್ ಮಹಲ್ ನೋಡಿಕೊಳ್ಳುವ ಜವಾಬ್ದಾರಿ ಯಾರದ್ದು?: ಉತ್ತರ ಪ್ರದೇಶ ಸರ್ಕಾರಕ್ಕೆ 'ಸುಪ್ರೀಂ' ತರಾಟೆ
ತಾಜ್ ಮಹಲ್
Published On :

ನವದೆಹಲಿ: ಯುನೆಸ್ಕೊ ವಿಶ್ವ ಪರಂಪರೆ ತಾಣವಾದ ತಾಜ್ ಮಹಲ್ ನ್ನು ಕಾಪಾಡುವಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ತಾಜ್ ಮಹಲ್ ನ ಉಸ್ತುವಾರಿ ಯಾರದ್ದು ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಇಲ್ಲಿ ಎಡಗೈ ಏನು ಮಾಡುತ್ತಿದೆ ಎಂದು ಬಲಗೈಗೆ ಗೊತ್ತಾಗುವುದಿಲ್ಲ, ಇದು ಅಚ್ಚರಿ ಉಂಟು ಮಾಡುತ್ತಿದೆ, 1996ರಲ್ಲಿ ತಾಜ್ ಟ್ರಪೆಝಿಯಮ್ ವಲಯ ಸ್ಥಾಪನೆ ಮಾಡಿದ ನಂತರ ತಾಜ್ ಮಹಲ್ ನ್ನು ರಕ್ಷಿಸುವ ಕೆಲಸವಾಗಿಲ್ಲ ಎಂದು ಛೀಮಾರಿ ಹಾಕಿದೆ.

ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ತಾಜ್ ಮಹಲ್ ಟ್ರಾಪಜಿಯಂಗೆ ಸಂಬಂಧಿಸಿದಂತೆ ವಿಷನ್ ಡಾಕ್ಯುಮೆಂಟ್ ನ ಕರಡು ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನೀವು ಕರಡು ವರದಿ ಏಕೆ ರಚಿಸಿದ್ದೀರಿ? ಅದನ್ನು ನಾವು ಸರಿ ಮಾಡಬೇಕೆ, ಸರಿಮಾಡಬೇಕಾಗಿರುವವರು ಯಾರು ಎಂದು ಕೇಳಿದೆ.

ಮೊದಲು ಪರಿಸರ ಸಚಿವಾಲಯ ಅಫಿಡವಿಟ್ಟು ಸಲ್ಲಿಸಿತು, ನಂತರ ಎಎಸ್ಐ, ನಂತರ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದೆ, ಇಲ್ಲಿ ಏನು ನಡೆಯುತ್ತಿದೆ ಎಂದು ಕೇಳಿರುವ ನ್ಯಾಯಮೂರ್ತಿ ಮದನ್ ಭೀಮರಾವ್ ನೇತೃತ್ವದ ವಿಭಾಗೀಯ ಪೀಠ, ತಾಜ್ ಮಹಲ್ ಸುತ್ತಮುತ್ತಲಿನ ಪ್ರದೇಶದ ಮರು ಅಭಿವೃದ್ಧಿ ಮತ್ತು ರಕ್ಷಣೆ ಮಾಡಬೇಕೆಂದು ತಾಖೀತು ಮಾಡಿದೆ.

ತಾಜ್ ಮಹಲ್ ನಂಥ ವಿಶ್ವಪರಂಪರೆ ತಾಣದ ಜವಾಬ್ದಾರಿ ವಹಿಸಿಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಲೋಕೂರ್, ತಾಜ್ ಮಹಲ್ ನ ಉಸ್ತುವಾರಿಯನ್ನು ಯಾವುದಾದರೂ ಒಂದು ಪ್ರಾಧಿಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.

ಉತ್ತರ ಪ್ರದೇಶ ಸರ್ಕಾರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ತಾಜ್ ಟ್ರಾಪೆಜೊಯಮ್ ವಲಯದಲ್ಲಿ ಕೈಗಾರಿಕಗಳ ಮರು ಸ್ಥಳಾಂತರದ ಜವಾಬ್ದಾರಿ ಎಎಸ್ಐಯದ್ದು ಅಲ್ಲ ಎಂಬ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದರು.

ಕಳೆದ 24ರಂದು ಸುಪ್ರೀಂ ಕೋರ್ಟ್ ಗೆ ಕರಡು ವಿಷನ್ ದಾಖಲೆಗಳನ್ನು ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರ ವಿಶ್ವಪರಂಪರೆ ತಾಣವನ್ನು ರಕ್ಷಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಸರ್ಕಾರದ ಉದ್ದೇಶಿತ ಕರಡು ವಿಷನ್ ದಾಖಲೆಯಲ್ಲಿ, ತಾಜ್ ಮಹಲ್ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಯನ್ನು ಮತ್ತು ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಾಗಿ ಹೇಳಿತ್ತು. ಯಮುನಾ ನದಿ ತೀರದಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಮತ್ತು ಉತ್ತಮ ಸಂಚಾರ ನಿರ್ವಹಣೆ ಮಾಡುವುದಾಗಿ ಕೂಡ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.