ದೇಶ

ಮೂರು ಸಿಂಹಗಳಿಂದ ತನ್ನ ಮಾಲೀಕನನ್ನು ರಕ್ಷಿಸಿದ ನಾಯಿ!

ಗುಜರಾತ್ ನ ಅಂಬಾರ್ಡಿಯ ಅಮ್ರೇಲಿ ಎಂಬಲ್ಲಿ ಸಾಕು ನಾಯಿಯೊಂದು ಮೂರು ಸಿಂಹಗಳಿಂದ ತನ್ನ ಮಾಲಿಕನನ್ನು ರಕ್ಷಿಸಿ ಶಹಬ್ಬಾಸ್ ಗಿರಿ ಪಡೆದಿದೆ....

ಮೂರು ಸಿಂಹಗಳಿಂದ ತನ್ನ ಮಾಲೀಕನನ್ನು ರಕ್ಷಿಸಿದ ನಾಯಿ!
ದಾಳಿಗೊಳಗಾದ ಕುರಿ ಗಾಹಿ
Published On :
ಗುಜರಾತ್:  ನಾಯಿ ನಿಯತ್ತಿನ ಪ್ರಾಣಿ ಎಂಬುದರ ಜೊತೆಗೆ ಮನುಷ್ಯನ ಉತ್ತಮ ಸ್ನೇಹಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಗುಜರಾತ್ ನ ಅಂಬಾರ್ಡಿಯ ಅಮ್ರೇಲಿ ಎಂಬಲ್ಲಿ ಸಾಕು ನಾಯಿಯೊಂದು ಮೂರು ಸಿಂಹಗಳಿಂದ ತನ್ನ ಮಾಲಿಕನನ್ನು ರಕ್ಷಿಸಿ ಶಹಬ್ಬಾಸ್ ಗಿರಿ ಪಡೆದಿದೆ.
ಅಮ್ರೆಲಿಯಾದ ಭವೇಶ್ ಹಮೀರ್ ಭಾರ್ವಾಡ್ ಎಂಬ ಕುರಿಗಾಹಿಯ ಕುರಿಗಳ ಮೇಲೆ ಸಿಂಹಗಳು ದಾಳಿ ಮಾಡಿದವು. ಈ ವೇಳೆ ಆತ ತನ್ನ ಕುರಿಗಳನ್ನು ರಕ್ಷಿಸಿಕೊಳ್ಳಲು ಸಿಂಹಗಳನ್ನು ಒಡೆದೊಡಿಸಲು ಪ್ರಯತ್ನಿಸಿದ.  ದುರಾದೃಷ್ಟ ವಶಾತ್ ಮೂರು ಕುರಿಗಳು ಸಾವನ್ನಪ್ಪಿದವು.
ಈ ವೇಳೆ ಸಿಂಹಗಳು ಕುರಿಗಾಹಿಯ ಮೇಲೆ ದಾಳಿ ಮಾಡಲು ಯತ್ನಿಸಿದವು,. ಇದೇ ಸಮಯದಲ್ಲಿ ಎಚ್ಚೆತ್ತುಕೊಂಡ ನಾಯಿ ಜೋರಾಗಿ ಬೊಗಳಲು ಆರಂಭಿಸಿದೆ, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಓಡಿ ಬಂದು ಕುರಿಹಾಯಿಯನ್ನು ರಕ್ಷಿಸಿದ್ದಾರೆ. ಜನರ ಗುಂಪುನ್ನು ನೋಡಿದ ಸಿಂಹಗಳು ಅಲ್ಲಿಂದ ಓಡಿ ಹೋಗಿವೆ.
ನಾಯಿಗೆ ಯಾವುದೇ ಗಾಯಗಳಾಗಲಿಲ್ಲ, ಆದರೇ ಕುರಿಗಾಯಿ ಭವೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.