ಭಾಷಣದ ವೇಳೆ 'ಜುಮ್ಲಾ' ಪದ ಬಳಿಸಿದ ರಾಹುಲ್: ಅರ್ಥ ತಿಳಿಯಲು ಗೂಗಲ್ ಮೊರೆ ಹೋದ ಜನತೆ
ಅವಿಶ್ವಾಸ ನಿರ್ಣಯದ ಪರ ಮಾತನಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಳಿತಾರೂಢ ಎನ್'ಡಿಎ ಪಕ್ಷದ ವಿರುದ್ಧ ಬಳಸಿದ ಜುಮ್ಲಾ ಪದದ ಅರ್ಥ ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದು, ಗೂಗಲ್...

Published On :
ನವದೆಹಲಿ: ಅವಿಶ್ವಾಸ ನಿರ್ಣಯದ ಪರ ಮಾತನಾಡುವ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಳಿತಾರೂಢ ಎನ್'ಡಿಎ ಪಕ್ಷದ ವಿರುದ್ಧ ಬಳಸಿದ ಜುಮ್ಲಾ ಪದದ ಅರ್ಥ ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದು, ಗೂಗಲ್ ಶೋಧದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿತ್ತು ಎಂಬುದಾಗಿ ತಿಳಿದುಬಂದಿದೆ.
ಶುಕ್ರವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್, ನಾವೆಲ್ಲಾ ಈ ಸರ್ಕಾರದ ಜುಮ್ಲಾ ದಾಳಿಯ ಬಲಿಪಶುಗಳು ಎಂದು ಹೇಳಿದ್ದರು.
ರಾಹುಲ್ ಅವರು ಜುಮ್ಲಾ ಪದ ಬಳಕೆ ಮಾಡುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ. ದಕ್ಷಿಣದ ರಾಜ್ಯಗಳ ನೆಟ್ಟಿಗರು, ಜುಮ್ಲಾ ಪದ ಅರ್ಥಕ್ಕಾಗಿ ಗೂಗಲ್ ನಲ್ಲಿ ಭಾರೀ ಹುಡುಕಾಟ ನಡೆಸತೊಡಗಿದ್ದರು.
ರಾಹುಲ್ ಈ ಪದ ಬಳಿಸಿದ ಕೆಲ ಹೊತ್ತಿನ ಬಳಿಕ ದಕ್ಷಿಣ ರಾಜ್ಯಗಳಲ್ಲಿ ಇಂಟರ್ನೆಟ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಪದವಾಗಿ ಜುಮ್ಲಾ ಹೊರಹೊಮ್ಮಿತ್ತು. ಅದರಲ್ಲೂ ಕರ್ನಾಟಕ ಇಂತಹ ಹುಡುಕಾಟದಲ್ಲಿ ನಂ.1 ಸ್ಥಾನದಲ್ಲಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಪದ ಕುರಿತಂತೆ ಚರ್ಚೆಗಳು ಆರಂಭವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕರ್ನಾಟಕPM Modiಪ್ರಧಾನಿ ಮೋದಿRahul Gandhiರಾಹುಲ್ ಗಾಂಧಿNo Confidence MotionGoogle Searchಗೂಗಲ್ ಸರ್ಚ್ಅವಿಶ್ವಾಸ ನಿರ್ಣಯJumlas. Karnatakaಜುಮ್ಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


