ದೇಶ

ಬಿಜೆಪಿ ನಮಗೆ ಮತ್ತೆ ದ್ರೋಹ ಮಾಡಿದೆ : ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು

ಲೋಕಸಭೆಯಲ್ಲಿ ನಿನ್ನೆ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪ್ರತಿಪಕ್ಷಗಳನ್ನು ಸೋಲಿಸಿದ ...

ಬಿಜೆಪಿ ನಮಗೆ ಮತ್ತೆ ದ್ರೋಹ ಮಾಡಿದೆ : ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
ಎನ್ ಚಂದ್ರಬಾಬು ನಾಯ್ಡು
Published On :

ನವದೆಹಲಿ:ಲೋಕಸಭೆಯಲ್ಲಿ ನಿನ್ನೆ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪ್ರತಿಪಕ್ಷಗಳನ್ನು ಸೋಲಿಸಿದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಭಾರತೀಯ ಜನತಾ ಪಾರ್ಟಿ ರಾಜ್ಯಕ್ಕೆ ಮತ್ತೆ ದ್ರೋಹ ಬಗೆದಿದೆ ಎಂದಿದ್ದಾರೆ.

ಇಂದು ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸದ್ಯದ ಪರಿಸ್ಥಿತಿ ಬಗ್ಗೆ ದೇಶಕ್ಕೆ ತಿಳಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ 5 ಕೋಟಿ ಜನರ ಮನಸ್ಸಿಗೆ ನೋವಾಗಿದೆ. ನಾನಿಂದು ದೆಹಲಿಗೆ ಹೋಗುತ್ತಿದ್ದೇನೆ. ರಾಜ್ಯಕ್ಕೆ ಬಿಜೆಪಿ ಏನು ಅನ್ಯಾಯ ಮಾಡಿದೆ ಎಂದು ಇಡೀ ದೇಶಕ್ಕೆ ಹೇಳುತ್ತೇನೆ. ಬಿಜೆಪಿ ನಮಗೆ ಮತ್ತೆ ದ್ರೋಹವೆಸಗಿದ್ದು ಅದು ದುರದೃಷ್ಟಕರ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಈ ಮಧ್ಯೆ ತೆಲುಗು ದೇಶಂ ಪಕ್ಷದ ಸಂಸದ ಜಯದೇವ ಗಲ್ಲಾ ಪ್ರತಿಕ್ರಿಯೆ ನೀಡಿ ಆಂಧ್ರಪ್ರದೇಶವನ್ನು ದುರ್ಬಲಗೊಳಿಸಲು ಪ್ರಧಾನ ಮಂತ್ರಿಗಳು ನಮ್ಮನ್ನು ಕಟ್ಟಿಹಾಕಲು ನೋಡುತ್ತಿದ್ದರು ಎಂದು ಆರೋಪಿಸಿದರು.ಮತ್ತೊಬ್ಬ ಟಿಡಿಪಿ ನಾಯಕ ಸಂಸದ ಕೆ ಶ್ರೀನಿವಾಸ್, ಪ್ರಧಾನ ಮಂತ್ರಿಗಳ ಆಡಳಿತ ವೈಫಲ್ಯವನ್ನು ಎತ್ತಿತೋರಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದಿದ್ದಾರೆ.

ಬಹುಮತ ಇಲ್ಲಿ ಮುಖ್ಯವಲ್ಲ, ನೈತಿಕತೆ ಮುಖ್ಯ, ನೈತಿಕತೆ ಇಂದು ಗೆದ್ದಿದೆ. ದೇಶದಲ್ಲಿನ ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆಗಳು, ಆರ್ಥಿಕ ಪ್ರಗತಿ ಕುಂಠಿತ ಬಗ್ಗೆ ದೇಶದ ಗಮನ ಸೆಳೆದಿದ್ದೇವೆ. ಪ್ರಧಾನಿಗಳು ಪ್ರತಿಯೊಂದರಲ್ಲಿಯೂ ವಿಫಲರಾಗಿದ್ದು ದೇಶದ ಜನತೆಯ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.