ದೇಶ

ವಿಪಕ್ಷಗಳಿಗೆ ಮೊದಲ ಹಿನ್ನಡೆ, ವಿಶ್ವಾಸಮತದಿಂದ ಶಿವಸೇನೆ ದೂರ

ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಪಕ್ಷ ಮಂಡಿಸಲಿರುವ ಅವಿಶ್ವಾಸ ನಿರ್ಣಯ ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿಕೂಟದ ರೆಬೆಲ್ ಪಕ್ಷ ಶಿವಸೇನೆ ತಟಸ್ಥವಾಗಿರಲು ನಿರ್ಧರಿಸಿದೆ.

ವಿಪಕ್ಷಗಳಿಗೆ ಮೊದಲ ಹಿನ್ನಡೆ, ವಿಶ್ವಾಸಮತದಿಂದ ಶಿವಸೇನೆ ದೂರ
ಸಂಗ್ರಹ ಚಿತ್ರ
Published On :
ಮುಂಬೈ: ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಪಕ್ಷ ಮಂಡಿಸಲಿರುವ ಅವಿಶ್ವಾಸ ನಿರ್ಣಯ ವಿಚಾರಕ್ಕೆ ಸಂಬಂಧಿಸಿದಂತೆ ಎನ್ ಡಿಎ ಮೈತ್ರಿಕೂಟದ ರೆಬೆಲ್ ಪಕ್ಷ ಶಿವಸೇನೆ ತಟಸ್ಥವಾಗಿರಲು ನಿರ್ಧರಿಸಿದೆ.
ಮುಂಬೈನಲ್ಲಿ ಇಂದು ನಡೆದ ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ವಿಶ್ವಾಸಮತದಿಂದ ದೂರವುಳಿಯಲು ಶಿವಸೇನೆ ನಿರ್ಧರಿಸಿದೆ. ಲೋಕಸಭೆಯಲ್ಲಿ ಶಿವಸೇನೆ ಒಟ್ಟು 18 ಮಂದಿ ಸಂಸದರನ್ನು ಹೊಂದಿದ್ದು, ಎಲ್ಲ ಸಂಸದರಿಗೂ ಮತದಾನದಿಂದ ದೂರ ಉಳಿಯುವಂತೆ ಸೂಚನೆ ನೀಡಲಾಗದಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳೊಂದಿಹೆ ಮಾತನಾಡಿರುವ ಸಂಜಯ್ ರಾವತ್ ಅವರು, ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ತಾವು ಸರ್ಕಾರದ ಪರವಾಗಿ ಅಥವಾ ಸರ್ಕಾರ ವಿರುದ್ಧವಾಗಿ ಮತ ಹಾಕುವುದಿಲ್ಲ. ವಿಶ್ವಾಸ ಮತದಿಂದ ನಾವು ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದೇವೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಸೂಚನೆ ಮೇರೆಗೆ ತಟಸ್ಥವಾಗಿರಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಅಂತೆಯೇ ಎನ್ ಡಿಎ ಮೈತ್ರಿ ಕುರಿತು ಮಾತನಾಡಿದ ಸಂಜಯ್ ರಾವತ್ ಅವರು, ಜನರ ಆಯ್ಕೆ ಬದಲಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಇದು ನಿರ್ಧಾರವಾಗಲಿದೆ. ಆದರೆ ಈಗ ಎದ್ದಿರುವ ಅವಿಶ್ವಾಸ ನಿರ್ಣಯ ಸರಿಯಲ್ಲ. ನಮಗೂ ಮೈತ್ರಿ ಧರ್ಮ ಪರಿಪಾಲನೆ ಮಾಡಬೇಕು ಎಂಬ ಆಸೆಯಿದೆ. ಆದರೆ ಗೌರವವಿರದ ಕಡೆ ಇರಬೇಕಾಗಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.