ತೀವ್ರ ವಾಗ್ದಾಳಿ ಬಳಿಕ ಕಲಾಪದಲ್ಲಿಯೇ ಪ್ರಧಾನಿ ಮೋದಿರನ್ನು ಆಲಂಗಿಸಿಕೊಂಡ ರಾಹುಲ್!
ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಭಾಷಣದ ಬಳಿಕ ಕಲಾಪದಲ್ಲಿಯೇ ಮೋದಿಯವರ ಬಳಿ ತೆರಳಿ ಹಸ್ತಲಾಘವ ಮಾಡಿ ಆಲಂಗಿಸಿದರು...

Published On :
ನವದೆಹಲಿ; ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಭಾಷಣದ ಬಳಿಕ ಕಲಾಪದಲ್ಲಿಯೇ ಮೋದಿಯವರ ಬಳಿ ತೆರಳಿ ಹಸ್ತಲಾಘವ ಮಾಡಿ ಆಲಂಗಿಸಿದರು.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿಯವರು ಗಂಭೀರ ಆರೋಪಗಳನ್ನು ಮಾಡಿದ್ದ ಹಿನ್ನಲೆಯಲ್ಲಿ ಬಿಜೆಪಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸದನದಲ್ಲಿ ತೀವ್ರ ಗದ್ದಲ ಉಂಟಾದ ಹಿನ್ನಲೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಮಧ್ಯಾಹ್ನ 1.45ಕ್ಕೆ ಮುಂದೂಡಿದರು.
ಮತ್ತೆ ಕಲಾಪ ಆರಂಭವಾದ ಬಳಿಗ ತಮ್ಮ ಭಾಷಣವನ್ನು ಮುಂದುವರೆಸಿದ ರಾಹುಲ್ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ವಿಭಿನ್ನ ರಾಜಕಾರಿಗಳೆಂದೇ ಹೇಳಬಹುದು. ನಮಗೆ ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ. ಆದರೆ, ಮೋದಿ, ಶಾಗೆ ಅಧಿಕಾರ ಇಲ್ಲದಿದ್ದರೆ ಆಗುವುದಿಲ್ಲ ಎಂದು ಹೇಳಿದರು.
ಇದೀಗ ಮೋದಿ ಹಾಗೂ ಶಾ ಅವರನ್ನು ಸೋಲಿಸಲು ನಾವು ವಿರೋಧ ಪಕ್ಷಗಳೆಲ್ಲಾ ಒಂದಾಗಿದ್ದೇವೆ. ನಾನು ನಿಮಗೆ ಪಪ್ಪು ಆಗಿರಬಹುದು. ಆದರೆ, ಕಾಂಗ್ರೆಸ್ ಪಕ್ಷ ದೇಶವನ್ನು ಕಟ್ಟಿದೆ. ನನ್ನಲ್ಲಿರುವ ಆಕ್ರೋಶ ಭಾವನೆಗಳು ಬಿಜೆಪಿ ಸದಸ್ಯರಲ್ಲೂ ಕೂಡ ಇದೆ. ನಾನು ಎಲ್ಲರನ್ನೂ ಕಾಂಗ್ರೆಸ್ಸಿಗರನ್ನಾಗಿ ಬದಲಾಯಿಸುತ್ತೇನೆಂದು. ಹೇಳಿದರು.
ಸುದೀರ್ಘೆ ವಾಗ್ದಾಳಿ ಬಳಿಕ ಪ್ರಧಾನಿ ಮೋದಿಯವರು ಕುಳಿತಿರುವ ಸ್ಥಳಕ್ಕೆ ಬಂದ ರಾಹುಲ್ ಅವರು, ಹಸ್ತಲಾಘವ ನೀಡಿ, ಆಲಂಗಿಸಿ ಮತ್ತೆ ತಾವಿದ್ದ ಸ್ಥಳಕ್ಕೆ ಬಂದರು, ಈ ವೇಳೆ ಇಡೀ ಸದನ ನಗೆ ಗಡಲಲ್ಲಿ ತೇಲಾಡಿತು.
ಮೋದಿಯವರನ್ನು ಆಲಂಗಿಸಿದ ಬಳಿಕ ಮತ್ತೆ ತಮ್ಮ ಸ್ಥಳಕ್ಕೆ ಬಂದ ರಾಹುಲ್ ಗಾಂಧಿಯವರು ನಾನು ಹಿಂದೂ, ನೀವು ಎಷ್ಟೇ ದೂರ ತಳ್ಳಿದರೂ ಹತ್ತಿರ ಮಾಡಿಕೊಳ್ಳುತ್ತೇನೆಂದರು.
ಬಳಿಕ ಮಾತನಾಡಿದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸದನದ ಗೌರವ ಘನತೆ ಎತ್ತಿಹಿಡಿದು, ಆರೋಪ ಮಾಡುವ ವೇಳೆ ಸಾಕ್ಷ್ಯಧಾರಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


