ಕಲಾಪ ಆರಂಭ: ಅವಿಶ್ವಾಸ ನಿರ್ಣಯವನ್ನು ಪ್ರಶ್ನೋತ್ತರ ಅವಧಿಯಂತೆ ಪರಿಗಣಿಸಬಾರದು ಎಂದ ಮಲ್ಲಿಕಾರ್ಜುನ ಖರ್ಗೆ
ಇಡೀ ದೇಶ ಈ ವಿಶೇಷ ಅಧಿವೇಶನವನ್ನು ವೀಕ್ಷಿಸುತ್ತಿದ್ದು, ಅವಿಶ್ವಾಸ ನಿರ್ಣಯವನ್ನು ಪ್ರಶ್ನೋತ್ತರ ಅವಧಿಯಂತೆ ಪರಿಗಣಿಸಬಾರದು ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Published On :
ನವದೆಹಲಿ: ಇಡೀ ದೇಶ ಈ ವಿಶೇಷ ಅಧಿವೇಶನವನ್ನು ವೀಕ್ಷಿಸುತ್ತಿದ್ದು, ಅವಿಶ್ವಾಸ ನಿರ್ಣಯವನ್ನು ಪ್ರಶ್ನೋತ್ತರ ಅವಧಿಯಂತೆ ಪರಿಗಣಿಸಬಾರದು ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಇಡೀ ದೇಶ ಈ ಕಲಾಪವನ್ನು ಕುತೂಹಲದಿಂದ ನೋಡುತ್ತಿದೆ. ದೇಶದಲ್ಲಿನ ನಾನಾ ವಿಚಾರಗಳ ಕುರಿತು ಚರ್ಚಿಸಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ವಿಪಕ್ಷಗಳಿಗೆ ನೀಡಿರುವ ಕಾಲಾವಕಾಶದ ಮಿತಿ ಸರಿಯಲ್ಲ. ವಿಪಕ್ಷಗಳಿಗೆ ಮಾತನಾಡಲು ಸಮಯದ ಮಿತಿ ನೀಡಬಾರದು ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ವಾದವನ್ನು ಒಪ್ಪದ ಸುಮಿತ್ರಾ ಮಹಾಜನ್ ಅವರು, ಎಲ್ಲದಕ್ಕೂ ಒಂದು ಅಂತ್ಯವಿರುತ್ತದೆ. ನಿರಂತರವಾಗಿರಲು ನಾವು ದೇವರಲ್ಲ. ಹೀಗಾಗಿ ನಾವು ಭಾಷಣಕ್ಕೆ ಮಿತಿ ಹೇರಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿ, ಖರ್ಗೆ ಅವರ ಮನವಿಯನ್ನು ತಳ್ಳಿ ಹಾಕಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiMallikarjun khargeಮಲ್ಲಿಕಾರ್ಜುನ ಖರ್ಗೆNo Confidence MotionSumitra Mahajanಅವಿಶ್ವಾಸ ನಿರ್ಣಯಸುಮಿತ್ರಾ ಮಹಾಜನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


