ದೇಶದ ಆಡಳಿತಗಾರರು ಹತ್ಯೆಗಾರರು, ಅವರು ಮನುಷ್ಯರನ್ನು ಕೊಂದು ಪ್ರಾಣಿಗಳನ್ನು ಉಳಿಸುತ್ತಾರೆ : ಶಿವಸೇನಾ
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷ ಶಿವಸೇನಾ ವಾಗ್ದಾಳಿ ನಡೆಸಿದ್ದು,ದೇಶದ ಆಡಳಿತಗಾರರ ಹತ್ಯೆಗಾರರು, ಅವರು ಪ್ರಾಣಿಗಳನ್ನು ಉಳಿಸುತ್ತಾರೆ, ಮನುಷ್ಯರನ್ನು ಕೊಲ್ಲುತ್ತಾರೆ ಎಂದು ಟೀಕಿಸಿದೆ.

ಮುಂಬೈ: ಲೋಕಸಭೆಯಲ್ಲಿ ಇಂದು ಅವಿಶ್ವಾಸ ನಿರ್ಣಯದ ಅಗ್ನಿಪರೀಕ್ಷೆ ಎದುರಿಸುತ್ತಿರುವ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷ ಶಿವಸೇನಾ ವಾಗ್ದಾಳಿ ನಡೆಸಿದ್ದು,ದೇಶದ ಆಡಳಿತಗಾರರ ಹತ್ಯೆಗಾರರು, ಅವರು ಪ್ರಾಣಿಗಳನ್ನು ಉಳಿಸುತ್ತಾರೆ, ಮನುಷ್ಯರನ್ನು ಕೊಲ್ಲುತ್ತಾರೆ ಎಂದು ಟೀಕಿಸಿದೆ.
ಹಣ, ಅಧಿಕಾರ ದುರುಪಯೋಗ ಹಾಗೂ ಇವಿಎಂ ಮೂಲಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಶಿವಸೇನಾ ಅನುಮಾನ ವ್ಯಕ್ತಪಡಿಸಿದೆ.
ದೇಶದ ಆಡಳಿತಗಾರರು ಹತ್ಯೆಗಾರರಾಗಿದ್ದು, ಅವರು ಪ್ರಾಣಿಗಳನ್ನು ರಕ್ಷಿಸುತ್ತಾರೆ ಮನುಷ್ಯರನ್ನು ಕೊಲ್ಲುತ್ತಾರೆ. ಆಡಳಿತಗಾರರಲ್ಲಿ ಸಹಾನೂಭೂತಿ ಎಂಬುದು ಇಲ್ಲ. ಹಣದ ಮೂಲಕ ಚುನಾವಣೆಯಲ್ಲಿ ಗೆದ್ದು , ಅಧಿಕಾರ ಉಳಿಸಿಕೊಳ್ಳುವುದು ಪ್ರಜಾಪ್ರಭುತ್ವ ಇಲ್ಲ. ಬಹುಮತ ಶಾಶ್ವತವಾದದ್ದಲ್ಲ. ದೇಶದ ಜನರೇ ಸುಪ್ರೀಂ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಅವಿಶ್ವಾಸ ನಿರ್ಣಯದಿಂದ ಮೋದಿ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಆದರೂ. ಬೆದರಿಕೆ ನೀಡಲಾಗುತ್ತಿದೆ. ಬಹುಮತ ಎಂಬುದು ಶಾಶ್ವತವಾಗಿ ಉಳಿಯಲ್ಲ ಅಂದರೆ ಅದು ಜನರ ಹಕ್ಕು, ಸರ್ವಾಧಿಕಾರವನ್ನು ಜನರು ಕಿತ್ತೊಗೆಯುವ ಅಧಿಕಾರ ಹೊಂದಿದ್ದಾರೆ. ರಾಜಕೀಯ ಉದ್ದೇಶ ಕಾರಣದಿಂದ ಅವರು ಜನರ ಭಾವನೆಯೊಂದಿಗೆ ಆಟವಾಡುತ್ತಿದ್ದಾರೆ. ಆದರೆ. ಚುನಾವಣೆಯ ಗಿಮ್ಮಿಕ್ ವಾಸ್ತವ ಎಂದು ಹೇಳಲಾಗಿದೆ.
ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಅನುಮಾನವಾಗಿದೆ. ಪ್ರತಿಷ್ಠೆಯ ಕಾರಣದಿಂದಾಗಿ 25 ವರ್ಷಗಳ ಮೈತ್ರಿ ಪಕ್ಷವಾಗಿರುವ ನಮ್ಮಲ್ಲಿ ಬಿಜೆಪಿ ಬಗ್ಗೆ ಅಪನಂಬಿಕೆ ಉಂಟಾಗಿದೆ . ಈ ಪ್ರತಿಷ್ಠೆಯೇ ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಲು ಪ್ರಮುಖ ಕಾರಣವಾಗಿದೆ ಎಂದು ಉದ್ದವ್ ಠಾಕ್ರೆ ನಾಯಕತ್ವದ ಶಿವಸೇನಾ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


