ಅವೈಜ್ಞಾನಿಕವಾಗಿ ರಾಜ್ಯ ಇಬ್ಭಾಗ, ಕಾಂಗ್ರೆಸ್ ವಿರುದ್ಧ ಟಿಡಿಪಿ ಪರೋಕ್ಷ ವಾಗ್ದಾಳಿ
ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ತೆಲುಗುದೇಶಂ ಪಕ್ಷ ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧವೂ ತನ್ನ ವಾಗ್ದಾಳಿ ನಡೆಸಿದ್ದು, ಅವೈಜ್ಞಾನಿಕವಾಗಿ ಆಂಧ್ರ ಪ್ರದೇಶ ರಾಜ್ಯವನ್ನು ಇಬ್ಭಾಗ ಮಾಡಲಾಗಿದೆ.

Published On :
ನವದೆಹಲಿ: ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ತೆಲುಗುದೇಶಂ ಪಕ್ಷ ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧವೂ ತನ್ನ ವಾಗ್ದಾಳಿ ನಡೆಸಿದ್ದು, ಅವೈಜ್ಞಾನಿಕವಾಗಿ ಆಂಧ್ರ ಪ್ರದೇಶ ರಾಜ್ಯವನ್ನು ಇಬ್ಭಾಗ ಮಾಡಲಾಗಿದೆ.
ಅವಿಶ್ವಾಸ ನಿರ್ಣಯ ಕುರಿತು ಇಂದು ಲೋಕಸಭೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಅವೈಜ್ಞಾನಿಕವಾಗಿ ರಾಜ್ಯ ವಿಭಜನೆಯಾಗಿದೆ. ರಾಜ್ಯ ವಿಭಜನೆ ವೇಳೆ ಆಸ್ತಿಗಳನ್ನು ತೆಲಂಗಾಣಕ್ಕೆ ನೀಡಲಾಗಿದ್ದು, ಸಾಲದ ಶೂಲವನ್ನು ಆಂಧ್ರ ಪ್ರದೇಶಕ್ಕೆ ನೀಡಲಾಗಿದೆ. ಪ್ರಾದೇಶಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಪ್ರಮಾಣದ ಆಧಾರದ ಮೇರೆಗೆ ಹಂಚಿಕೆ ಮಾಡಲಾಗಿದ್ದ ಆರ್ಥಿಕ ನೆರವಿನಲ್ಲೂ ಆಂಧ್ರ ಪ್ರದೇಶಕ್ಕೆ ಅನ್ಯಾಯವಾಗಿದೆ. ತೆಲಂಗಾಣ ಹೊಸ ಹೆಸರನ್ನಿಟ್ಟುಕೊಂಡಿರುವ ಹಳೆಯ ರಾಜ್ಯವಾಗಿದ್ದು, ಆಂಧ್ರ ಪ್ರದೇಶ ಹಳೆಯ ಹೆಸರನ್ನಿಟ್ಟುಕೊಂಡಿರುವ ಹೊಸ ರಾಜ್ಯವಾಗಿದೆ.
ತೆಲಂಗಾಣ ಈಗಾಗಲೇ ನಿರ್ಮಾಣವಾಗಿರುವ ರಾಜ್ಯವಾಗಿದ್ದು, ಆಂಧ್ರ ಪ್ರದೇಶ ಈಗಿನ್ನೂ ನಿರ್ಮಾಣವಾಗಬೇಕಿರುವ ರಾಜ್ಯ. ರಾಜಧಾನಿ ನಿರ್ಮಾಣದ ಹೊರೆ ಕೂಡ ಆಂಧ್ರ ಪ್ರದೇಶದ ಮೇಲಿದೆ. ಹೀಗಾಗಿ ರಾಜ್ಯ ವಿಭಜನೆ ವೇಳೆ ಆಂಧ್ರ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಬೇಕಿತ್ತು, ಇದಾವುದನ್ನೂ ಲೆಕ್ಕಿಸದೇ ರಾಜ್ಯ ವಿಭಜನೆ ಮಾಡಲಾಗಿದೆ. ಅಂದು ಕೈಗೊಂಡಿದ್ದ ಅವೈಜ್ಞಾನಿಕ ನಿರ್ಧಾರದಿಂದ ಇಂದು ಆಂಧ್ರ ಪ್ರದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಜಯದೇವ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


