ದೇಶ

ತಮಿಳುನಾಡು: ಆದಾಯ ತೆರಿಗೆ ಇಲಾಖೆ ದಾಳಿ; 163 ಕೋಟಿ ನಗದು, 100 ಕೆಜಿ ಚಿನ್ನ ವಶ

ರಸ್ತೆ ನಿರ್ಮಾಣ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ತಮಿಳುನಾಡು ಆದಾಯ ತೆರಿಗೆ ಇಲಾಖೆ , ಈವರೆಗೂ ನಡೆಸಿದ ದಾಳಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ 163 ಕೋಟಿ ನಗದು, ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

ತಮಿಳುನಾಡು: ಆದಾಯ ತೆರಿಗೆ ಇಲಾಖೆ ದಾಳಿ; 163 ಕೋಟಿ ನಗದು, 100 ಕೆಜಿ ಚಿನ್ನ ವಶ
ಸಾಂದರ್ಭಿಕ ಚಿತ್ರ
Published On :

ತಮಿಳುನಾಡು : ರಸ್ತೆ  ನಿರ್ಮಾಣದ  ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ತಮಿಳುನಾಡು ಆದಾಯ ತೆರಿಗೆ ಇಲಾಖೆ , ಈವರೆಗೂ ನಡೆಸಿದ ದಾಳಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ 163  ಕೋಟಿ ನಗದು, ಹಾಗೂ 100 ಕೆಜಿ  ಚಿನ್ನವನ್ನು ವಶಪಡಿಸಿಕೊಂಡಿದೆ.

ಸರ್ಕಾರದಿಂದ ಹೆದ್ದಾರಿ ಹಾಗೂ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯುತ್ತಿದ್ದ ಎಸ್ ಪಿಕೆ ಮತ್ತು ಕಂಪನಿ , ಪಾಲುದಾರ ಸಂಸ್ಥೆಗಳ ಆವರಣದಲ್ಲಿ ನಿನ್ನೆಯಿಂದ ಶೋಧ ಕಾರ್ಯಾಚಾರಣೆ ನಡೆಸಲಾಗುತ್ತಿದೆ.

ದಾಳಿ ಇಂದು ಕೂಡಾ ಮುಂದುವರೆದಿದ್ದು, ಲೆಕ್ಕ ನೀಡಿದ 163 ಕೋಟಿ ನಗದು ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದೇಶದ  ಯಾವುದೇ ಕಡೆ ನಡೆಸಿದ ದಾಳಿಗಳಲ್ಲಿ ಇಷ್ಟೊಂದು ಮೊತ್ತದ ಹಣ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿರಲಿಲ್ಲ  ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ನೋಟು ಅಮಾನ್ಯಗೊಂಡ ಸಂದರ್ಭದಲ್ಲಿ ಚೆನ್ನೈನಲ್ಲಿ ಗಣಿಗಾರಿಕೆ ಬ್ಯಾರೊನ್ ವೊಂದರ ಮೇಲೆ ನಡೆದ ದಾಳಿ ವೇಳೆಯಲ್ಲಿ 110 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಚೆನ್ನೈ  ವಿಚಾರಣಾ ವಿಭಾಗದ ಐಟಿ ಇಲಾಖೆಯಿಂದ ಈ ದಾಳಿ ನಡೆಸಲಾಗಿದೆ.

ದಾಳಿ ವೇಳೆಯಲ್ಲಿ  ರಸ್ತೆ ನಿರ್ಮಾಣ ಸಂಸ್ಥೆ ಹಾಗೂ ಅವರ ಪಾಲುದಾರಿಕೆಯ ಸಂಸ್ಥೆಗಳು ತೆರಿಗೆಯಿಂದ ತಪ್ಪಿಸಿಕೊಂಡಿರುವ ಬಗ್ಗೆ ಸಾಕ್ಷ್ಯಧಾರಗಳನ್ನು ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇವರೊಂದಿಗೆ ರಾಜಕೀಯ ನಂಟು ಇರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೆನ್ನೈನಲ್ಲಿ 7 ಹಾಗೂ ವಿರುದ್ಧ್ ನಗರ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಹಾಗೂ ವೆಲ್ಲೂರು ಬಳಿಯ ಒಂದು ಕಡೆ ಒಟ್ಟು 22 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಶಪಡಿಸಿಕೊಂಡ ಹಣ ಹಾಗೂ ಚಿನ್ನಾಭರಣವನ್ನು ದೊಡ್ಡದಾದ ಪ್ರಯಾಣ ಬ್ಯಾಗ್ ನಲ್ಲಿ ಇರಿಸಿ ಕಾರಿನಲ್ಲಿಡಲಾಗಿದೆ. ಡಜನ್ ಗೂ ಹೆಚ್ಚು ಚಿನ್ನದ ಬಿಸ್ಕತ್ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ  ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.