ದೇಶ

ಈರುಳ್ಳಿ ಹೇಗೆ ಬೆಳೆಯುತ್ತದೆ ಎಂಬುದು ರಾಹುಲ್ ಗಾಂಧಿಗೆ ಗೊತ್ತಿಲ್ಲ- ಶಿವರಾಜ್ ಸಿಂಗ್ ಚೌಹ್ಹಾಣ್

ಈರುಳ್ಳಿ ಹೇಗೆ ಬೆಳೆಯುತ್ತದೆ ಎಂಬ ಬಗ್ಗೆಯೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ವಾಗ್ದಾಳಿ ನಡೆಸಿದ್ದಾರೆ.

ಈರುಳ್ಳಿ ಹೇಗೆ ಬೆಳೆಯುತ್ತದೆ ಎಂಬುದು  ರಾಹುಲ್ ಗಾಂಧಿಗೆ ಗೊತ್ತಿಲ್ಲ- ಶಿವರಾಜ್ ಸಿಂಗ್ ಚೌಹ್ಹಾಣ್
ಶಿವರಾಜ್ ಸಿಂಗ್ ಚೌಹ್ಹಾಣ್
Published On :

 ಉಜ್ಜೈನಿ : ಇತ್ತೀಚಿಗೆ ಮಾಂಡಸೂರ್ ನ ರೈತರನ್ನು ಭೇಟಿ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ  ಮಧ್ಯಪ್ರದೇಶ  ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ವಾಗ್ದಾಳಿ ನಡೆಸಿದ್ದಾರೆ. ಈರುಳ್ಳಿ ಹೇಗೆ ಬೆಳೆಯುತ್ತದೆ ಎಂಬ ಬಗ್ಗೆಯೂ ರಾಹುಲ್ ಗಾಂಧಿ ಅವರಿಗೆ  ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಣ್ , ರಾಹುಲ್ ಗಾಂಧಿ ತಮ್ಮಷ್ಟಕ್ಕೆ ತಾವೇ ಪ್ರಧಾನಿಯಾಗಲು ಸಿದ್ಧವಿರುವುದಾಗಿ ಹೇಳುತ್ತಿದ್ದಾರೆ. ಆದರೆ. ಅವರನ್ನು ಪ್ರಧಾನಿಯನ್ನಾಗಿ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
  ರಾಹುಲ್ ಗಾಂಧಿಗೆ ಮೆಣಸಿನ ಕಾಯಿ ಹೇಗೆ ಬೆಳೆಯುತ್ತದೆ, ಮೇಲೆನಾ  ಅಥವಾ ಕೆಳಗೆ ಬೆಳೆಯುತ್ತಾ ಅನ್ನೋ ಬಗ್ಗೆ ಅರಿವಿಲ್ಲ. ಈರುಳ್ಳಿ  ನೆಲದ ಒಳಗೆ ಬೆಳೆಯುತ್ತಾ  ಅಥವಾ ಮೇಲೆ ಬೆಳೆಯುತ್ತಾ ಎಂಬ ಬಗ್ಗೆ ರಾಹುಲ್ ಗಾಂಧಿ ಗೆ ಗೊತ್ತೇ ಇಲ್ಲ ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.