ವಾಚ್‍ಮ್ಯಾನ್ ಜೊತೆಗಿನ ಸರಸ ಸಲ್ಲಾಪ ಕಂಡ ಬಾಲಕ ಹತ್ಯೆ: 8ನೇ ತರಗತಿ ವಿದ್ಯಾರ್ಥಿನಿ ಬಂಧನ
ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ...

Published On :
ಪಾಟ್ನಾ: ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾಟ್ನಾದ ಖಾಸಗಿ ಶಾಲೆಯೊಂದರ ವಸತಿಗೃಹದಲ್ಲಿ 8 ವರ್ಷದ ವಿದ್ಯಾರ್ಥಿನಿ ತಂಗಿದ್ದು ಅದೇ ವಸತಿಗೃಹದಲ್ಲಿ ಮೃತ 6 ವರ್ಷದ ಬಾಲಕ ಸಹ ತಂಗಿದ್ದ. ಶೌಚಾಲಯದಲ್ಲಿ ವಿದ್ಯಾರ್ಥಿನಿ ವಾಚ್‍ಮ್ಯಾನ್ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಬಾಲಕ ಕಂಡಿದ್ದು ಈ ಹಿನ್ನೆಲೆಯಲ್ಲಿ ಆತನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಜುಲೈ 9ರ ಬೆಳಗ್ಗೆ ಮೃತ ಅಭಿಮನ್ಯು ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 6ರಂದು ವಾಚ್‍ಮ್ಯಾನ್ ವಿದ್ಯಾರ್ಥಿನಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಸರಸ ಸಲ್ಲಾಪದಲ್ಲಿ ತೊಡಗಿದ್ದ ಇದನ್ನು ಬಾಲಕ ಕಂಡಿದ್ದು ನಂತರ 9ರಂದು ಆತ ಮೃತಪಟ್ಟಿದ್ದ. ಬಾಲಕ ಹತ್ಯೆ ನಂತರ ವಾಚ್‍ಮ್ಯಾನ್ ನಾಪತ್ತೆಯಾಗಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


