ಹಿಂದೂ-ಪಾಕಿಸ್ತಾನ ಹೇಳಿಕೆ: ಶಶಿತರೂರ್ ಗೆ ಕೊಲ್ಕೋತಾ ಕೋರ್ಟ್ ಸಮನ್ಸ್
ಹಿಂದೂ-ಪಾಕಿಸ್ತಾನ ಹೇಳಿಕೆ ಸಂಬಂಧ ಕೊಲ್ಕೊತಾ ಹೈಕೋರ್ಟ್ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಸಮನ್ಸ್ ನೀಡಿದೆ....

Published On :
ಕೊಲ್ಕೊತಾ: ಹಿಂದೂ-ಪಾಕಿಸ್ತಾನ ಹೇಳಿಕೆ ಸಂಬಂಧ ಕೊಲ್ಕೊತಾ ಹೈಕೋರ್ಟ್ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಸಮನ್ಸ್ ನೀಡಿದೆ.
ಕೊಲ್ಕೊತಾ ಮೂಲದ ವಕೀಲ ಸುಮೀತ್ ಚೌಧುರಿ ಸಲ್ಲಿಸಿದ ತಮ್ಮ ಅರ್ಜಿಯಲ್ಲಿ, ತರೂರ್ ಅವರು ತಮ್ಮ ಹೇಳಿಕೆ ಮೂಲಕ ದೇಶದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಘರ್ಷಣೆ ಹಾಗೂ ಸಾಮರಸ್ಯ ಕೊರತೆಯಾಗುತ್ತಿದೆ ಇದರಿಂದ ಧರ್ಮ ಒಡೆಯಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಮತ್ತು 295 ಎ ಅಡಿಯಲ್ಲಿ ದೂರು ದಾಖಲಾಗಿದ್ದು, ಆಗಸ್ಟ್ 14 ರೊಳಗೆ ಕೋರ್ಟ್ ಗೆ ಹಾಜರಾಗುವಂತೆ ಸೂಚಿಸಲಾಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನ ವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಮನ್ಸ್ಶಶಿ ತರೂರ್shashi taroorಹಿಂದೂ ಪಾಕಿಸ್ತಾನ ಹೇಳಿಕೆHindu-Pakistan remark. SummonsKolkata Courtಕೊಲ್ಕೊತಾ ಕೋರ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


