ದೇಶ

ಪ್ರಧಾನಿ ವಿದೇಶಗಳ ಒತ್ತಡಕ್ಕೆ ಶರಣಾಗಿದ್ದಾರೆ: ಚೀನಾ ಭೇಟಿ ಉಲ್ಲೇಖಿಸಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ವಿದೇಶಗಳ ಒತ್ತಡಕ್ಕೆ ಶರಣಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ಚೀನಾ ಭೇಟಿಯನ್ನು ಉಲ್ಲೇಖಿಸಿದ್ದಾರೆ.

ಪ್ರಧಾನಿ ವಿದೇಶಗಳ ಒತ್ತಡಕ್ಕೆ ಶರಣಾಗಿದ್ದಾರೆ: ಚೀನಾ ಭೇಟಿ ಉಲ್ಲೇಖಿಸಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ರಾಹುಲ್ ಗಾಂಧಿ
Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶಗಳ ಒತ್ತಡಕ್ಕೆ ಶರಣಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ಚೀನಾ ಭೇಟಿಯನ್ನು ಉಲ್ಲೇಖಿಸಿದ್ದಾರೆ. 
ಏಪ್ರಿಲ್ ನಲ್ಲಿ ಮೋದಿ ಚೀನಾಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿರುವ ರಾಹುಲ್ ಗಾಂಧಿ, ಭಾರತದ ಇತಿಹಾಸದಲ್ಲಿ ಹಿಂದೆಂದೂ ಯಾವ ಪ್ರಧಾನಿಯೂ ವಿದೇಶಗಳ ಪ್ರಭಾವಕ್ಕೆ ಶರಣಾಗಿರಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.  ಚೀನಾದೊಂದಿಗೆ ಗಡಿ ಪ್ರದೇಶಗಳಲ್ಲಿ  ತ್ವರಿತವಾಗಿ ಕಾರ್ಯಾಚರಣೆ ಮಾಡುವ ಮೌಂಟೇನ್ ಸ್ಟ್ರೈಕ್ ಕಾರ್ಪ್ಸ್ ನ ಹೊಸ  ವಿಭಾಗಕ್ಕೆ ಆರ್ಥಿಕ ಕಾರಣ ನೀಡಿ ಈ ಪ್ರಸ್ತಾಪವನ್ನು ಸೇನೆ ಮುಂದೂಡಿತ್ತು. ಈ ಬಗ್ಗೆ ಪ್ರಸ್ತಾಪಿಸಿರುವ ರಾಹುಲ್ ಗಾಂಧಿ, "ನಮ್ಮ ಪ್ರಧಾನಿಯ ಚೀನಾ ಭೇಟಿಗೆ ಅಜೆಂಡಾ ಇರಲೇ ಇಲ್ಲ ಎಂದು ಟೀಕಾಪ್ರಹಾರ ನಡೆಸಿದ್ದು, ಚೀನಾದ ಗೌಪ್ಯ ಅಜೆಂಡಾ ಈಗ ಬಹಿರಂಗವಾಗುತ್ತಿದೆ. ಆದರೆ ಈಗಿನ ಪ್ರಧಾನಿ ವಿದೇಶಗಳ ಪ್ರಭಾವಕ್ಕೆ ಶರಣಾಗುತ್ತಿರುವಂತೆ ಈ ಹಿಂದಿನ ಯಾವ ಪ್ರಧಾನಿಗಳೂ ಶರಣಾಗಿರಲಿಲ್ಲ, ಈಗ ಬಿಜೆಪಿಯ ರಾಷ್ಟ್ರೀಯವಾದ ಬಹಿರಂಗವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.