ದೇಶ

ಥಾಯ್ಲೆಂಡ್ ಗುಹೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರ ನಿಜಕ್ಕೂ ಅವಿಸ್ಮರಣೀಯ!

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ....

ಥಾಯ್ಲೆಂಡ್ ಗುಹೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರ ನಿಜಕ್ಕೂ ಅವಿಸ್ಮರಣೀಯ!
ಸಂಗ್ರಹ ಚಿತ್ರ
Published On :
ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ 12 ಪುಟ್ಬಾಲ್ ಆಟಗಾರರು ಹಾಗೂ ಕೋಚ್ ರನ್ನು ಸುರಕ್ಷಿತವಾಗಿ ಕರೆತರಲಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ. 
ಇನ್ನು ಈ ಕಾರ್ಯಾಚರಣೆಯಲ್ಲಿ ಭಾರತದ ಪಾತ್ರವೂ ಸಹ ಹೆಚ್ಚಿದೆ. ಹೌದು ಥಾಯ್ಲೆಂಡ್ ಸರ್ಕಾರದ ಮನವಿ ಮೇರೆಗೆ ಮಹಾರಾಷ್ಟ್ರದ ಮೀರಜ್ ನ ಎಂಜಿನಿಯರ್ ಪ್ರಸಾದ್ ಕುಲಕರ್ಣಿ ನೇತೃತ್ವದಲ್ಲಿ ಕಿರ್ಲೊಸ್ಕರ್ ಫ್ಲಡ್ ಪಂಪ್ ಟೀಂ ಕಾರ್ಯಾಚರಣೆಯಲ್ಲಿ ಮಹತ್ವದ ಕಾರ್ಯವನ್ನು ನಿಭಾಯಿಸಿದೆ. 
ಕಿರ್ಲೊಸ್ಕರ್ ಫ್ಲಡ್ ಪಂಪ್ ತಂಡದ ಪರಿಣಿತಿ ಕುರಿತಂತೆ ಥಾಯ್ ಅಧಿಕಾರಿಗಳಿಗೆ ಭಾರತೀಯ ರಾಯಭಾರಿ ಅಧಿಕಾರಿಗಳು ತಿಳಿಸಿತು. ತಕ್ಷಣ ಥಾಯ್ ಸರ್ಕಾರ ಅವರನ್ನು ಕಳುಹಿಸಿಕೊಡುವಂತೆ ಕೋರಿತು. ಅಂತೆ ಭಾರತ ಸರ್ಕಾರ ಈ ನಿಪುಣ ತಂಡವನ್ನು ಥಾಯ್ಲೆಂಡ್ ಗೆ ಕಳುಹಿಸಿತು. ಈ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರವಹಿಸಿದೆ. 
ರಕ್ಷಣಾ ಕಾರ್ಯಾಚರಣೆಯಲ್ಲಿ ಈ ತಂಡ ತಂತ್ರಜ್ಞಾನದ ಮಾಹಿತಿ, ಸಲಹೆ ಮತ್ತು ಪಂಪ್ ಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದ್ದಲ್ಲದೇ ನೀರನ್ನು ಹೊರತೆಗೆಯುವಲ್ಲಿ ಮಹತ್ವದ ಪಾತ್ರವಹಿಸಿದೆ. 
ಈ ಕಾರ್ಯಾಚರಣೆಯಲ್ಲಿ ತಂಡವು ವಿಶಿಷ್ಟ ಉನ್ನತ ಸಾಮರ್ಥ್ಯದ ಆಟೋಮೇಟಿಕ್ ಪ್ರೈಮ್ ಡಿವರೇಟಿಂಗ್ ಪಂಪ್ ಗಳನ್ನು ಬಳಸಿಕೊಂಡಿತ್ತು. ಜೂನ್ 24ರಂದು ಈ ತಂಡ ಕಾರ್ಯಾಚರಣೆ ಕೈಗೊಂಡಿದ್ದು ಜುಲೈ 10ಕ್ಕೆ ಯಶಸ್ವಿಯಾಗಿ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಒಟ್ಟಾರೆ 18 ದಿನಗಳ ನರಕಯಾತನೆಯಿಂದ ಬಾಲಕರು ಮತ್ತು ಕೋಚ್ ರನ್ನು ಸುರಕ್ಷಿತವಾಗಿ ಹೊರತರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.