ತೂಕ ಕಡಿಮೆ ಶಸ್ತ್ರಚಿಕಿತ್ಸೆ ಜಯಲಲಿತಾಗೆ ಇಷ್ಟವಿರಲಿಲ್ಲ- ವೈದ್ಯರ ಹೇಳಿಕೆ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಯುತ್ತಿದ್ದು, ತೂಕ ಕಡಿಮೆ ಶಸ್ತ್ರಚಿಕಿತ್ಸೆಯನ್ನು ಜಯಲಲಿತಾ ವಿರೋಧಿಸುತ್ತಿದ್ದರು ಎಂದು ಏಕ ಸದಸ್ಯ ತನಿಖಾ ಸಮಿತಿಯ ಮುಂದೆ ವೈದ್ಯರು ಹೇಳಿಕೆ ನೀಡಿದ್ದಾರೆ.

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವು ಪ್ರಕರಣದ ತನಿಖೆ ನಡೆಯುತ್ತಿದ್ದು, ತೂಕ ಕಡಿಮೆ ಶಸ್ತ್ರಚಿಕಿತ್ಸೆಯನ್ನು ಜಯಲಲಿತಾ ವಿರೋಧಿಸುತ್ತಿದ್ದರು. ಡಯಟ್ ಮುೂಲಕವೇ ತೂಕ ಕಡಿಮೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು ಎಂದು ಏಕ ಸದಸ್ಯ ತನಿಖಾ ಸಮಿತಿಯ ಮುಂದೆ ವೈದ್ಯರು ಹೇಳಿಕೆ ನೀಡಿದ್ದಾರೆ.
ಜಯಲಲಿತಾ ಅವರ ಶಸ್ತ್ರಚಿಕಿತ್ಸೆ ಬೇಡ ಎನ್ನುತ್ತಿದ್ದರು. ನಿಯಮಿತ ಆಹಾರದ ಮೂಲಕವೇ ತೂಕ ಇಳಿಸಿಕೊಳ್ಳುವುದಾಗಿ ಹೇಳುತ್ತಿದ್ದರು ಎಂದು ಅಡ್ಡ ಪರೀಕ್ಷೆಯ ಸಮಯದಲ್ಲಿ, ಪ್ರಮುಖ ಆಸ್ಪತ್ರೆಯೊಂದರಲ್ಲಿರುವ ಮಧುಮೇಹ ವೈದ್ಯೆ ಡಾ. ಜಯಶ್ರೀ ಗೋಪಾಲ್ ಹೇಳಿಕೆ ನೀಡಿದ್ದಾರೆ.
ಜಯಲಲಿತಾ ಆಪ್ತೆ ವಿ. ಕೆ. ಶಶಿಕಲಾ ಪರ ವಕೀಲ ಎನ್, ರಾಜ ಸಂತೊರು ಪಾಂಡಿಯನ್ ನಡೆಸಿದ ಅಡ್ಡ ಪರೀಕ್ಷೆ ವೇಳೆಯಲ್ಲಿ , ಜಯಲಲಿತಾಗೆ ತೂಕ ಕಡಿಮೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ನಡೆದಾಡಲು ಸುಲಭವಾಗುತ್ತದೆ. ಥೈರಾಡ್ ನಂತಹ ಮಾನಸಿಕ ಯಾತನೆಯಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಿದ್ದರು
ಆದಾಗ್ಯೂ, ಜಯಲಲಿತಾ ಡಯಟ್ ಮೂಲಕವೇ ತೂಕ ಕಡಿಮೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ದೈಹಿಕವಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಮರ್ಥ್ಯ ತನ್ನಗಿಲ್ಲ ಎಂದು ಹೇಳುತ್ತಿದ್ದರು ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
2016ರಲ್ಲಿ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಇರಬೇಕಾದರೆ ಜಯಲಲಿತಾ ಮಿತಿಯಲ್ಲಿಯೇ ಸ್ವೀಟ್ ತಿಂದಿದ್ದರು ಎಂದು ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


