ಸಮರ್ಥನೆಗಾಗಿ ಸಂಪರ್ಕ ಪ್ರಚಾರ: ಸೆಹ್ವಾಗ್ ಭೇಟಿ ಮಾಡಿದ ರಾಜ್ಯವರ್ಧನ್ ರಾಥೋರ್
ಸಮರ್ಥನೆಗಾಗಿ ಸಂಪರ್ಕ ಪ್ರಚಾರದ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಹಿರಿಯ ಕ್ರಿಕೆಟ್ ಆಟಗಾರ ಸೆಹ್ವಾಗ್ ಅವರನ್ನು ಭೇಟಿ ಮಾಡಿದರು.

ನವದೆಹಲಿ: ಸಮರ್ಥನೆಗಾಗಿ ಸಂಪರ್ಕ ಪ್ರಚಾರದ ಭಾಗವಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಹಿರಿಯ ಕ್ರಿಕೆಟ್ ಆಟಗಾರ ಸೆಹ್ವಾಗ್ ಅವರನ್ನು ಭೇಟಿ ಮಾಡಿದರು.
ನಂತರ ಮಾತನಾಡಿದ ರಾಜ್ಯವರ್ಧನ್ ಸಿಂಗ್ ರಾಥೋರ್, ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಸಮರ್ಥನೆಗಾಗಿ ಸಂಪರ್ಕ ಪ್ರಚಾರ ಹಮ್ಮಿಕೊಂಡಿದ್ದು, ಸಮಾಜದ ಗಣ್ಯರನ್ನು ಭೇಟಿ ಮಾಡುವ ಮೂಲಕ ಸಮಾಜದ ಮೇಲೆ ಪರಿಣಾಮ ಬೀರಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರಸರ್ಕಾರದ ಆಡಳಿತದ ಬಗ್ಗೆಯೂ ಅವರಿಂದ ಸಲಹೆ ಪಡೆದುಕೊಳ್ಳಲಾಗುತ್ತಿದ್ದು, ಸೆಹ್ವಾಗ್ ಕೂಡಾ ಕೆಲವೊಂದು ಸಲಹೆ ನೀಡಿದ್ದಾರೆ. ಕ್ರೀಡಾಪಟುಗಳು ಇಂದಿನ ಯುವಜನಾಂಗದ ಮೇಲೆ ಹೇಗೆ ಪರಿಣಾಮ ಬೀರಬಹುದೆಂಬ ಬಗ್ಗೆ ತಮ್ಮೊಂದಿಗೆ ಸೆಹ್ವಾಗ್ ಅಭಿಪ್ರಾಯ ಹಂಚಿಕೊಂಡಿರುವುದಾಗಿ ರಾಜ್ಯವರ್ಧನ್ ಸಿಂಗ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


