ದೇಶ

ಕಾಂಗ್ರೆಸ್ ಇಲ್ಲದೆ ವಿಪಕ್ಷಗಳಲ್ಲಿ ಒಗ್ಗಟ್ಟು 'ಅಸಾಧ್ಯ': ಶಿವಸೇನೆ

ಕಾಂಗ್ರೆಸ್ ಇಲ್ಲದೇ ವಿಪಕ್ಷಗಳಲ್ಲಿ ಒಗ್ಗಟ್ಟು ಸಾಧ್ಯವಿಲ್ಲ ಎಂದು ಎನ್ ಡಿಎ ಮಿತ್ರಪಕ್ಷ ಶಿವಸೇನೆ ಹೇಳಿದೆ.

ಕಾಂಗ್ರೆಸ್ ಇಲ್ಲದೆ ವಿಪಕ್ಷಗಳಲ್ಲಿ ಒಗ್ಗಟ್ಟು 'ಅಸಾಧ್ಯ': ಶಿವಸೇನೆ
ಶಿವಸೇನೆ
Published On :
ಮುಂಬೈ: ಕಾಂಗ್ರೆಸ್ ಇಲ್ಲದೇ ವಿಪಕ್ಷಗಳಲ್ಲಿ ಒಗ್ಗಟ್ಟು ಸಾಧ್ಯವಿಲ್ಲ ಎಂದು ಎನ್ ಡಿಎ ಮಿತ್ರಪಕ್ಷ ಶಿವಸೇನೆ ಹೇಳಿದೆ. 
ಎಲ್ಲಾ ಪ್ರಾದೇಶಿಕ ಪಕ್ಷಗಳೂ ಸ್ವೀಕರಿಸುವ ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಇನ್ನೂ ಅಸ್ತಿತ್ವದಲ್ಲಿದ್ದು, ಕಾಂಗ್ರೆಸ್ ಇಲ್ಲದೇ ವಿರೋಧಪಕ್ಷಗಳಲ್ಲಿ ಒಗ್ಗಟ್ಟು ಮೂಡುವುದಕ್ಕೆ ಸಾಧ್ಯವಿಲ್ಲ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.  2019 ರ ಲೋಕಸಭಾ ಚುನಾವಣೆಗಾಗಿ ವಿರೋಧಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕಾಗಿ ಯತ್ನಿಸಿರುವುದರ ಬಗ್ಗೆ ಶಿವಸೇನೆ ಸಾಮ್ನಾದಲ್ಲಿ ಲೇಖನ ಪ್ರಕಟಿಸಿದ್ದು, ಪ್ರಾದೇಶಿಕ ಪಕ್ಷಗಳ ಒಗ್ಗಟ್ಟಿಗೆ ಕಾಂಗ್ರೆಸ್ ಅತ್ಯಗತ್ಯ ಎಂದು ಹೇಳಿದೆ. 
ಪ್ರಧಾನಿ ಪಟ್ಟಕ್ಕೆ ಹಲವು ಆಕಾಂಕ್ಷಿಗಳಿರುವ ವಿರೋಧಪಕ್ಷಗಳ ಎದುರಿರುವ ಸವಾಲೆಂದರೆ ಅದು ರಾಹುಲ್ ಗಾಂಧಿಯನ್ನು ನಾಯಕನೆಂದು ಒಪ್ಪಿಕೊಳ್ಳುವುದೋ ಬಿಡುವುದೋ ಎಂಬುದಾಗಿದೆ. 2014 ರಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆತಿತ್ತು. ವಿಪಕ್ಷಗಳ ನಡುವಿನ ಒಡಕೂ ಸಹ ಬಿಜೆಪಿಗೆ ವರದಾನವಾಗಿತ್ತು, ಇಷ್ಟೆಲ್ಲಾ ಅವಕಾಶವಿದ್ದರೂ ಬಿಜೆಪಿ ಆಡಳಿತದಲ್ಲಿ ವಿಫಲಗೊಂಡಿದ್ದು, ಜನರಲ್ಲಿ ಅಸಮಾಧಾನ ಮೂಡುವಂತಾಗಿದೆ.  ಬಿಜೆಪಿಯನ್ನು ಎಲ್ಲಾ ಮಿತ್ರಪಕ್ಷಗಳೂ ತೊರೆದಿವೆ.  ಒಂದಷ್ಟು ಪ್ರಾದೇಶಿಕ ಪಕ್ಷಗಳಷ್ಟೇ 2019 ರಲ್ಲಿ ಬಿಜೆಪಿಗೆ ನೆರವಾಗಬಲ್ಲವು ಎಂದು ಶಿವಸೇನೆ ಹೇಳಿದೆ. 
ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ 100 ಸ್ಥಾನಗಳು ಕಡಿಮೆ ಬಂದಲ್ಲಿ ಸಂಸದರಲ್ಲಿ ಪುಟಿನ್ ರಿಂದಲೋ, ಡೊನಾಲ್ಡ್ ಟ್ರಂಪ್ ರಿಂದಲೋ ಅಥವಾ ಯುಎಇ ಯಿಂದಲೋ ತರುತ್ತಾರಾ? ಎಂದು ಶಿವಸೇನೆ ವ್ಯಂಗ್ಯವಾಗಿ ಪ್ರಶ್ನಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.