ಲೈಂಗಿಕ ಕಿರುಕುಳ? ಗಾಯಕ ಅಂಕಿತ್ ತಿವಾರಿ ತಂದೆಗೆ ಹೊಡೆದ ವಿನೋದ್ ಕಾಂಬ್ಳಿ, ಪತ್ನಿ ವಿರುದ್ಧ ದೂರು ದಾಖಲು!
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆ್ಯಂಡ್ರಿಯಾ ಅವರು ಗಾಯಕ ಅಂಕಿತ್ ತಿವಾರಿ ಅವರ ತಂದೆಗೆ ಹೊಡೆದಿದ್ದು ಈ ಸಂಬಂಧ ದೂರು ದಾಖಲಾಗಿದೆ...

Published On :
ಮುಂಬೈ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆ್ಯಂಡ್ರಿಯಾ ಅವರು ಗಾಯಕ ಅಂಕಿತ್ ತಿವಾರಿ ಅವರ ತಂದೆಗೆ ಹೊಡೆದಿದ್ದು ಈ ಸಂಬಂಧ ದೂರು ದಾಖಲಾಗಿದೆ.
ಮುಂಬೈನ ಇನ್ ಆರ್ಬಿಟ್ ಮಾಲ್ ನಲ್ಲಿ ಅಂಕಿತ್ ತಿವಾರಿ ತಂದೆ 59 ವರ್ಷದ ರಾಜೇಂದ್ರ ತಿವಾರಿ ಅವರು ತನ್ನನ್ನು ಅನುಚಿತವಾಗಿ ಪದೇ ಪದೇ ಮುಟ್ಟಿದರು ಎಂಬ ಕಾರಣಕ್ಕೆ ಆ್ಯಂಡ್ರಿಯಾ ತನ್ನ ಕೈಯಲ್ಲಿದ್ದ ಬ್ಯಾಗಿನಿಂದ ಹೊಡೆದಿದ್ದು, ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ರಾಜೇಂದ್ರ ತಿವಾರಿ ಅವರು ವಿನೋದ್ ಕಾಂಬ್ಳಿ ಮತ್ತು ಆ್ಯಂಡ್ರಿಯಾ ವಿರುದ್ಧ ಹಲ್ಲೆ ಆರೋಪ ದಾಖಲಿಸಿದ್ದಾರೆ.
ಇದೇ ವೇಳೆ ಆ್ಯಂಡ್ರಿಯಾ ಮತ್ತು ಕುಂಬ್ಳೆ ಸಹ ಪೊಲೀಸರಿಗೆ ದೂರು ನೀಡಿದ್ದು ರಾಜೇಂದ್ರ ತಿವಾರಿ ತನ್ನನ್ನು ಕೆಟ್ಟ ಉದ್ದೇಶದಿಂದ ಪದೇ ಪದೇ ಮುಟ್ಟಿದ್ದಾನೆ. ಆತನ ಲೈಂಗಿಕ ಹಿಂಸೆಯನ್ನು ತಾಳಲಾರದೆ ಆತನಿಗೆ ಹೊಡೆದು ಬುದ್ಧಿಕಲಿಸಿದೆ ಎಂದು ಹೇಳಿದ್ದಾರೆ.
ವಿನೋದ್ ಕಾಂಬ್ಳಿ ತನ್ನ ಪತ್ನಿಯ ಮೇಲೆ ಮಾಲ್ ನಲ್ಲಿ ಮೂವರು ದಾಳಿ ಮಾಡಿದ್ದಾರೆ ಎಂದು ಕಾಂಬ್ಳಿ ಎಫ್ಐಆರ್ ನಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈVinod Kambliವಿನೋದ್ ಕಾಂಬ್ಳಿAnkit TiwariAndrea HewittRK Tiwariಅಂಕಿತ್ ತಿವಾರಿಆ್ಯಂಡ್ರಿಯಾ ಹೆವಿಟ್ರಾಜೇಂದ್ರ ತಿವಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


