ದೇಶ

ಉತ್ತರಪ್ರದೇಶ: ಮುಸ್ಲಿಂ ಯುವತಿಯೊಂದಿಗೆ ವಿವಾಹ; ವ್ಯಕ್ತಿಗೆ ಉಗುಳು ನೆಕ್ಕುವ ಶಿಕ್ಷೆ ನೀಡಿದ ಪಂಚಾಯಿತಿ

ಪುತ್ರ ಮುಸ್ಲಿಂ ಯುವತಿಯನ್ನು ವಿವಾಹದ ಕಾರಣಕ್ಕೆ, ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ತನ್ನ ಉಗುಳು ತಾನೇ ನೆಕ್ಕುವಂತೆ ಪಂಚಾಯಿತಿಯೊಂದು ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ...

ಉತ್ತರಪ್ರದೇಶ: ಮುಸ್ಲಿಂ ಯುವತಿಯೊಂದಿಗೆ ವಿವಾಹ; ವ್ಯಕ್ತಿಗೆ ಉಗುಳು ನೆಕ್ಕುವ ಶಿಕ್ಷೆ ನೀಡಿದ ಪಂಚಾಯಿತಿ
ಉತ್ತರಪ್ರದೇಶ: ಮುಸ್ಲಿಂ ಯುವತಿಯೊಂದಿಗೆ ವಿವಾಹ; ವ್ಯಕ್ತಿಗೆ ಉಗುಳು ನೆಕ್ಕುವ ಶಿಕ್ಷೆ ನೀಡಿದ ಪಂಚಾಯಿತಿ
Published On :
ಬುಲಂದ್ ಶಹರ್: ಪುತ್ರ ಮುಸ್ಲಿಂ ಯುವತಿಯನ್ನು ವಿವಾಹದ ಕಾರಣಕ್ಕೆ, ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ತನ್ನ ಉಗುಳು ತಾನೇ ನೆಕ್ಕುವಂತೆ ಪಂಚಾಯಿತಿಯೊಂದು ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 
ಉತ್ತರಪ್ರದೇಶದ ಬುಲಂದ್ ಶಹರ್'ನ ಹಬೀಬ್ ಪುರ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದೌರ್ಜನ್ಯವೆಸಗಲಾಗಿದ್ದು, ಶಿಕ್ಷೆ ನೀಡುವ ವೇಳೆ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವುದಾಗಿಯೂ ಬೆದರಿಕಯೊಡ್ಡಲಾಗಿದ್ದು, ಕುಟುಂಬದೊಂದಿಗೆ ಕೂಡಲೇ ಗ್ರಾಮಬಿಡುವಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. 
ಮುಸ್ಲಿಂ ಯುವತಿಯೊಂದಿಗೆ ವಿವಾಹವಾದ ಕಾರಣ ಪಂಚಾಯಿತಿ ಸಭೆಯಲ್ಲಿ ಉಗುಳು ಉಗಿದು, ಮತ್ತೆ ಅದನ್ನು ನೆಕ್ಕುವಂತೆ ಶಿಕ್ಷೆ ನೀಡಲಾಯಿತು. ಅಲ್ಲದೆ, ಕುಟುಂಬದೊಂದಿಗೆ ಗ್ರಾಮವನ್ನು ತೊರೆಯುವಂತೆ ಆದೇಶಿಸಲಾಯಿತು. ಅಲ್ಲದೆ, ನನ್ನ ಪತ್ನಿ ಹಾಗೂ ಮಗಳನ್ನೂ ಕೂಡ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಬೇಕೆಂದು ಹೇಳಿದ್ದರು ಎಂದು ಸಂತ್ರಸ್ತ ವ್ಯಕ್ತಿ ಹೇಳಿಕೊಂಡಿದ್ದಾರೆ. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬುಲಂದರ್ ಶೆಹರ್ ಎಸ್'ಪಿ, ಘಟನೆ ಸಂಬಂಧ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.