ದೇಶ

ಯಾವುದೇ ಪಕ್ಷದೊಂದಿಗೂ ಕೈಜೋಡಿಸಿಲ್ಲ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್

ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿದ್ದಾರೆಂಬ ವದಂತಿಗಳಿಗೆ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂಕೋರ್ಟ್ ಎರಡನೇ ಮುಖ್ಯ ನ್ಯಾಯಾಮೂರ್ತಿ ಚಲಮೇಶ್ವರ್ ಅವರು, ನಾನು ಯಾವುದೇ ರಾಯಕೀಯ ಪಕ್ಷದೊಂದಿಗೂ ಕೈಜೋಡಿಸಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ...

ಯಾವುದೇ ಪಕ್ಷದೊಂದಿಗೂ ಕೈಜೋಡಿಸಿಲ್ಲ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್
ಸುಪ್ರೀಂಕೋರ್ಟ್ ಎರಡನೇ ಮುಖ್ಯ ನ್ಯಾಯಾಮೂರ್ತಿ ಚೆಲಮೇಶ್ವರ್
Published On :
ವಿಜಯವಾಡ: ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿದ್ದಾರೆಂಬ ವದಂತಿಗಳಿಗೆ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂಕೋರ್ಟ್ ಎರಡನೇ ಮುಖ್ಯ ನ್ಯಾಯಾಮೂರ್ತಿ ಚೆಲಮೇಶ್ವರ್ ಅವರು, ನಾನು ಯಾವುದೇ ರಾಯಕೀಯ ಪಕ್ಷದೊಂದಿಗೂ ಕೈಜೋಡಿಸಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ. 
ವಿಜಯವಾಡದ ಸಿದ್ಧಾರ್ಥ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿದ್ದಾರೆಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. 
ವೈಯಕ್ತಿಕ ನಂಬಿಕೆಗಳನ್ನು ನಾನು ಬಲವಾಗಿ ನಂಬುತ್ತೇನೆ. ಆದ್ಯತೆಗಳನ್ನು ಇಂತಹ ಸಂದರ್ಭಗಳಲ್ಲಿ ತರಬಾರದು. ನ್ಯಾಯಾಮೂರ್ತಿಯಾದಾಗಲೇ ರಾಜಕೀಯ ನಂಟು ಕುರಿತಂತೆ ನಾನು ಸ್ಪಷ್ಟನೆ ನೀಡಿದ್ದೆ. ಯಾವುದನ್ನೂ ನಾನು ಮುಚ್ಚಿಟ್ಟಿಲ್ಲ. ಸತ್ಯವನ್ನು ಅಂದು ನಾನು ಹೇಳದೆಯೇ ಹೋಗಿದ್ದರೆ ನಾನು ನ್ಯಾಯಮೂರ್ತಿ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿಯಾಗುತ್ತಿರಲಿಲ್ಲ. ಇಂದು ಜನರು ನನ್ನ ಕುರಿತು ಮಾತನಾಡುತ್ತಿದ್ದಾರೆ. ನನ್ನಂತೆ ಅದೆಷ್ಟು ಜನರು ಘೋಷಣೆಗಳನ್ನು ಮಾಡಿದ್ದಾರೆಯೋ ನನಗೆ ಗೊತ್ತಿಲ್ಲ. ಆ ಕುರಿತ ಮಾಹಿತಿಯನ್ನು ಕಲೆಹಾಕಿ. 
ಪ್ರತೀಯೊಬ್ಬರಿಗೂ ಸ್ವಾತಂತ್ರ್ಯವಿದೆ. ಅದನ್ನು ವಿವೇಚನೆಯಿಂದ ಬಳಕೆ ಮಾಡಬೇಕು. ಗಾಳಿ ಸುದ್ದಿಗಳನ್ನು ಜನರು ಹಬ್ಬಿಸಬಹುದು ಆದರೆ, ಅದು ಸಂವಿಧಾನದ ಚೌಕಟ್ಟಿನಲ್ಲಿರಬೇಕು. ನಿವೃತ್ತಿಯಾಗಲು ನನಗಿನ್ನೂ ನಾಲ್ಕು ತಿಂಗಳು ಬಾಕಿಯಿದೆ. ಇದೇ ಜಿಲ್ಲೆಯಲ್ಲಿ ನಾನು ವಾಸ್ತವ್ಯ ಹೂಡುತ್ತೇನೆ. ಕಟ್ಟವನ್ನು ಕಟ್ಟುತ್ತೇನೆ. ನಾನು ಈ ಸರ್ಕಾರ, ಆ ಸರ್ಕಾರ ಅಥವಾ ಇನ್ನಾವುದೇ ಪಕ್ಷದೊಂದಿಗೂ ಕೈ ಜೋಡಿಸುವುದಿಲ್ಲ. ಕೆಲಸಕ್ಕಾಗಿ ಯಾರ ಮುಂದೆಯೂ ಕೈಚಾಚುವುದಿಲ್ಲ ಎಂದು ಹೇಳಿದ್ದಾರೆ. 
ಸಮಾಜದಲ್ಲಿ ಯಾವಾಗಲೂ ಅಸಮಾನತೆ ಎಂಬುದು ಇದ್ದೇ ಇರುತ್ತದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಎಲ್ಲಾ ವಲಯದಲ್ಲೂ ಸಮಾನತೆ ಸ್ಥಾಪನೆ ಮಾಡುವುದ ಸಂವಿಧಾನದ ಉದ್ದೇಶವಾಗಿದೆ. ಅಸಮಾನತೆಯೆಂಬುದೂ ಇಡೀ ದೇಶದಾದ್ಯಂತ ಹಬ್ಬಿದೆ. ಚುನಾವಣೆಯಲ್ಲಿ, ವಂಶಪಾರಂಪರ್ಯ ರಾಜಕೀಯ ಹಾಗೂ ಭ್ರಷ್ಟಾಚಾರದಿಂದ ಹೆಚ್ಚಿದ ಹಣದ ಬಲದಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರತೀಯೊಬ್ಬರೂ ನೈತಿಕವಾಗಿರಬೇಕು. ಇದು ದೇಶಕ್ಕೆ ನಾನು ನೀಡುವ ಉತ್ತಮ ಕೊಡುಗೆಯಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ. ಅದು ಜೀವನದ ಹಾದಿ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.