ದೇಶ

ಪಕೋಡಾ ಮಾರುವುದು ಉದ್ಯೋಗವಾದರೆ, ಬಿಕ್ಷಾಟನೆ ಕೂಡ ಉದ್ಯೋಗವೇ: ಪಿ ಚಿದಂಬರಂ

ಪಕೋಡಾ ಮಾರುವುದು ಉದ್ಯೋಗವಾದರೆ, ಬಿಕ್ಷಾಟನೆ ಕೂಡ ಉದ್ಯೋಗವೇ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಪಕೋಡಾ ಮಾರುವುದು ಉದ್ಯೋಗವಾದರೆ, ಬಿಕ್ಷಾಟನೆ ಕೂಡ ಉದ್ಯೋಗವೇ: ಪಿ ಚಿದಂಬರಂ
ಸಂಗ್ರಹ ಚಿತ್ರ
Published On :
ನವದೆಹಲಿ: ಪಕೋಡಾ ಮಾರುವುದು ಉದ್ಯೋಗವಾದರೆ, ಬಿಕ್ಷಾಟನೆ ಕೂಡ ಉದ್ಯೋಗವೇ ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಉದ್ಯೋಗ ಸೃಷ್ಟಿ ಸಂಬಂಧ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಚಿದಂಬರಂ, ಉದ್ಯೋಗ ಸೃಷ್ಟಿ ಬಗ್ಗೆ ಕೇಂದ್ರ ಸರ್ಕಾರ ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ  ಟ್ವೀಟ್ ಮಾಡಿರುವ ಚಿದಂಬರಂ ಅವರು, "ಪಕೋಡ ಮಾರುವುದು ಕೂಡಾ ಉದ್ಯೋಗ ಎನಿಸಿದರೆ, ಭಿಕ್ಷಾಟನೆಯನ್ನು ಕೂಡಾ ಉದ್ಯೋಗಾವಕಾಶ ಎಂದು ಪರಿಗಣಿಸಬೇಕಾಗುತ್ತದೆ. ಉದ್ಯೋಗಸೃಷ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ  ಯಾವ ಮಾಹಿತಿಯೂ ಇಲ್ಲ ಎಂದು ಆಪಾದಿಸಿರುವ ಅವರು ಈ ಸಂಬಂಧ ಸರಣಿ ಟ್ವೀಟ್‍ ಗಳನ್ನು ಮಾಡಿದ್ದಾರೆ.
"ಪಕೋಡ ಮಾರುವುದು ಕೂಡಾ ಉದ್ಯೋಗ ಎಂದು ಮೋದಿ ಹೇಳುತ್ತಿದ್ದಾರೆ. ಅವರ ವಾದದಂತೆಯೇ ಸೈದ್ಧಾಂತಿಕವಾಗಿ ಭಿಕ್ಷೆ ಬೇಡುವುದು ಕೂಡಾ ಉದ್ಯೋಗವೇ. ಬಡವರು ಮತ್ತು ಅಂಗವಿಕಲರನ್ನು ಜೀವನಾಧಾರಕ್ಕಾಗಿ  ಬಲಾತ್ಕಾರದಿಂದ ಭಿಕ್ಷೆ ಬೇಡುವಂತೆ ನಿಯೋಜಿಸಿರುವ ಪ್ರಕರಣಗಳನ್ನು ಪ್ರಧಾನಿ ಮೋದಿ ಲೆಕ್ಕ ಹಾಕಲಿ. ನರೇಗಾ ಫಲಾನುಭವಿಗಳನ್ನು ಕೂಡಾ ಉದ್ಯೋಗಿಗಳು ಎಂದು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ. 100 ದಿನಗಳ ಕಾಲ  ಉದ್ಯೋಗಿಗಳಾಗಿರುವ ಇವರು 265 ದಿನ ನಿರುದ್ಯೋಗಿಗಳಾಗಿರುತ್ತಾರೆ. ನಿಜ ಅರ್ಥದಲ್ಲಿ ಉದ್ಯೋಗಾವಕಾಶ ಹೆಚ್ಚಬೇಕಿದ್ದರೆ, ಖಾಸಗಿ ಹೂಡಿಕೆ, ಖಾಸಗಿ ಬಳಕೆ, ರಫ್ತು ಮತ್ತು ಸಾಲದ ಬೇಡಿಕೆ ಹೆಚ್ಚಬೇಕು ಎಂದು ಚಿದಂಬರಂ ಟ್ವೀಟ್  ಮಾಡಿದ್ದಾರೆ. 
ಈ ಹಿಂದೆ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, "ಒಬ್ಬ ವ್ಯಕ್ತಿ ಪಕೋಡ ಮಾರಾಟ ಮಾಡಿ ಪ್ರತಿದಿನ ಸಂಜೆ 200 ರೂಪಾಯಿ ಮನೆಗೆ ಒಯ್ಯುತ್ತಾನೆ ಎಂದಾದರೆ ಇದನ್ನು ಉದ್ಯೋಗ ಎಂದು  ಪರಿಗಣಿಸಬೇಡವೇ?" ಎಂದು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.