ದೇಶ

ಕರ್ನಾಟಕ ವಿಧಾನಸಭಾ ಚುನಾವಣೆ: 'ಜನಪರ ಪ್ರಣಾಳಿಕೆ' ಸಿದ್ಧಪಡಿಸುವಂತೆ ಪಕ್ಷದ ನಾಯಕರಿಗೆ ರಾಹುಲ್ ಸೂಚನೆ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಪಕ್ಷದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆಂದು ಶನಿವಾರ ತಿಳಿದುಬಂದಿದೆ...

ಕರ್ನಾಟಕ ವಿಧಾನಸಭಾ ಚುನಾವಣೆ: 'ಜನಪರ ಪ್ರಣಾಳಿಕೆ' ಸಿದ್ಧಪಡಿಸುವಂತೆ ಪಕ್ಷದ ನಾಯಕರಿಗೆ ರಾಹುಲ್ ಸೂಚನೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
Published On :
ನವದೆಹಲಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಪಕ್ಷದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ತೆಗೆದುಕೊಂಡ ನಿಲುವುಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕದ ಚುನಾವಣೆಯಲ್ಲೂ ಅಂತಹದ್ದೇ ಕಾರ್ಯಗಳನ್ನು ಆರಂಭಿಸಲು ನಿರ್ಧರಿಸಿರುವ ರಾಹುಲ್ ಗಾಂಧಿಯವರು ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. 
ಪ್ರಣಾಳಿಕೆ ಸಿದ್ಧತೆ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ನೇತೃತತ್ವದಲ್ಲಿ ಈಗಾಗಲೇ ಕಾರ್ಯಗಳು ಆರಂಭಗೊಂಡಿದ್ದು, ಚುನಾವಣೆಗೂ ಮುನ್ನ ಎಲ್ಲಾ ವಲಯಗಳನ್ನೊಳಗೊಂಡ ಹಾಗೂ ಜನಪರ ಪ್ರಣಾಳಿಕೆ ಮೂಲಕ ಜನರ ಮುಂದೆ ಬರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಎಐಸಿಸಿ ವಕ್ತಾರ ಮಧು ಗೌಡ ಯಕ್ಷಿಯವರು, ಕರ್ನಾಟಕ ರಾಜ್ಯ ಜನತೆಯ ನಿರೀಕ್ಷೆಯನ್ನು ಮುಟ್ಟುವಂತಹ ಪ್ರಣಾಳಿಕೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಪ್ರಣಾಳಿಕೆ ಸಿದ್ಧಪಡಿಸುವುದಕ್ಕೂ ಮುನ್ನ ಕಾಂಗ್ರೆಸ್ ಎಲ್ಲಾ ವಲಯದ ಅಧಿಕಾರಿಗಳೊಂದಿಗೆ ಪ್ರತಿಕ್ರಿಯೆಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ. 
ಗುಜರಾತ್ ರಾಜ್ಯ ಚುನಾವಣೆ ಸಂದರ್ಭಲ್ಲೂ ತಾಂತ್ರಿಕ ಸಲಹೆಗಾರ ಸ್ಯಾಮ್ ಪಿಟ್ರೊಡಾ, ಆವರು ಗುಜರಾತ್ ರಾಜ್ಯದ ಐದು ನಗರಗಳ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ್ದರು. ವಡೋದರಾ, ಅಹಮದಾಬಾದ್, ರಾಜ್ಕೋಟ್, ಜಮ್ನಗರ ಮತ್ತು ಸೂರತ್ ನಗರ ಜನತೆಯೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ ಶಿಕ್ಷಣ, ಆರೋಗ್ಯ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಯುವಕರಿಗೆ ಉದ್ಯೋಗ ಮತ್ತು ಪರಿಸರ ರಕ್ಷಣೆಯಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿತ್ತು. ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆಂಬುದು ಇದರಿಂದ ತಿಳಿಯಿತು. ಇದು ನಮಗೆ ಸಹಾಯಕ್ಕೆ ಬಂದಿತ್ತು. ಕಚೇರಿಯಲ್ಲಿ ಕುಳಿತು ಪ್ರಣಾಳಿಕೆಯನ್ನು ಸಿದ್ಧಪಡಿಸುವುದಕ್ಕಿಂತಲೂ ಇದು ಉತ್ತಮವಾದ ದಾರಿಯಾಗಿದೆ. ಹೀಗಾಗಿ ಪಕ್ಷ ಇದೀಗ ಸಾಮಾಜಿಕ-ಅರ್ಥಿಕ ಅಂಶಗಳಂತಹ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳತ್ತ ಗಮನಹರಿಸುತ್ತದೆ ಎಂದು ತಿಳಿಸಿದ್ದಾರೆ. 
ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ್ದು, ಕ್ಷೀರ ಭಾಗ್ಯ, ಅನ್ನ ಭಾಗ್ಯ, ಕೃಷಿ ಭಾಗ್ಯ, ಇಂದಿರಾ ವಸ್ತ್ರ ಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಇನ್ನಿತರೆ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.