ದೇಶ

ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ: ಚಂದ್ರಬಾಬು ನಾಯ್ಡು

"ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ" ಆಂಧ್ರ ಪ್ರದೇಶ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ: ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Published On :
ಅಮರಾವತಿ: "ಬಿಜೆಪಿ ಮೈತ್ರಿ ಮುಂದುವರಿಸಲು ಬಯಸದಿದ್ದರೆ ಟಿಡಿಪಿ ತನ್ನದೇ ದಾರಿಯಲ್ಲಿ ಸಾಗಲಿದೆ" ಆಂಧ್ರ ಪ್ರದೇಶ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.ಈ ಮೂಲಕ ಅವರು ಬಿಜೆಪಿ ಮೈತ್ರಿಕೂಟದಿಂದ ದೂರ ಸರಿಯುವ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ನಾಯ್ಡು "ಟಿಡಿಪಿ ಇಂದಿಗೂ ಮಿತ್ರ ಧರ್ಮವನ್ನು ಪಾಲಿಸಿಕೊಂಡು ಬರುತ್ತಿದೆ. ಆದರೆ ಸ್ಥಳೀಯ ಬಿಜೆಪಿ ಮುಖಂಡರು ತಮ್ಮ ಇತಿ ಮಿತಿಗಳನ್ನು ಮೀರಿದ್ದಾರೆ. 
"ಅವರು (ಸ್ಥಳೀಯ ಬಿಜೆಪಿ ಮುಖಂಡರು) ಪದೇ ಪದೇ ಟೀಕಿಸುತ್ತಿದ್ದರೂ  ಅವರಿಗೆ ಪ್ರತ್ಯುತ್ತರ ನೀಡದಂತೆ ನನ್ನ ಪಕ್ಷದ ನಾಯಕರನ್ನು ನಾನು ನಿಯಂತ್ರಿಸುತ್ತಿದ್ದೇನೆ. ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ತಮ್ಮ ಪಕ್ಷದ ಸ್ಥಳೀಯ ಮುಖಂಡರು ಮಾಡುತ್ತಿರುವ ಆರೋಪಗಳ ಬಗೆಗೆ ಸೂಕ್ತ ಗಮನ ನೀಡುತ್ತಾರೆಂದು ನಾನು ಭರವಸೆ ಇಟ್ಟಿದ್ದೇನೆ" ಎಂದರು.
ಆಂಧ್ರ ಪ್ರದೇಶವು ಇತರೆ ರಾಜ್ಯಗಳಿಗೆ ಸಮಾನವಾಗಿ ಬೆಳವಣಿಗೆ ಸಾಧಿಸುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬೆಂಬಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.