ಮಹಾದಾಯಿ ಕಣ್ಗಾವಲಿಗೆ ಸಮಿತಿ ರಚಿಸಿದ ಗೋವಾ ಸರ್ಕಾರ
ಕರ್ನಾಟಕ ಸರ್ಕಾರ, ಕಾನೂನು ಬಾಹಿರವಾಗಿ ಮಹದಾಯಿ ನದಿ ಪಾತ್ರದಲ್ಲಿ ನಿರ್ಮಾಣ ಚಟುವಟಿಕೆ ಕೈಗೊಂಡಿದೆ ಎಂದು ಇತ್ತೀಚೆಗಷ್ಟೇ ಆರೋಪ ಮಾಡಿದ್ದ ಗೋವಾ ಸರ್ಕಾರ, ಇಂಥ ಯಾವುದೇ ನಿರ್ಮಾಣ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲೆಂದೇ 4 ಅಧಿಕಾರಿಗಳನ್ನು ಒಳಗೊಂಡ...

Published On :
ಪಣಜಿ: ಕರ್ನಾಟಕ ಸರ್ಕಾರ, ಕಾನೂನು ಬಾಹಿರವಾಗಿ ಮಹದಾಯಿ ನದಿ ಪಾತ್ರದಲ್ಲಿ ನಿರ್ಮಾಣ ಚಟುವಟಿಕೆ ಕೈಗೊಂಡಿದೆ ಎಂದು ಇತ್ತೀಚೆಗಷ್ಟೇ ಆರೋಪ ಮಾಡಿದ್ದ ಗೋವಾ ಸರ್ಕಾರ, ಇಂಥ ಯಾವುದೇ ನಿರ್ಮಾಣ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲೆಂದೇ 4 ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದ್ದು, ಈ ಕುರಿತು ಗುರುವಾರ ಅಧಿಸೂಚನೆ ಹೊರಡಿಸಿದೆ.
ಗೋವಾ ಜಲಸಂಪನ್ಮೂಲ ಸಚಿವಾಲಯದ 4 ಇಂಜಿನಿಯರ್ ಗಳನ್ನು ಒಳಗೊಂಡ ಈ ಸಮಿತಿಯು, ಮಹದಾಯಿ ನದಿ ಪಾತ್ರದಲ್ಲಿ ಕರ್ನಾಟಕ ನಿರ್ಮಾಣ ಚಟುವಟಿಕೆ ನಡೆಯುತ್ತಿದೆಯೇ ಎಂಬುದನ್ನು ಗಮಿನಿಸಿ ಪ್ರತಿ 15 ದಿನಗಳಿಗೊಮ್ಮೆ ಗೋವಾ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಇದಕ್ಕೆಂದೇ ಸಮಿತಿ ವಾರಕ್ಕೆ ಎರಡು ಬಾರಿ ನದಿ ಪಾತ್ರದ ರಾಜ್ಯಗಳಿಗೆ ಭೇಟಿ ನೀಡುವಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಸೂಚಿಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


