ದೇಶ

ಮೇವು ಹಗರಣದ 3ನೇ ಪ್ರಕರಣದ ತೀರ್ಪು ಪ್ರಕಟ; ಲಾಲೂ, ಜಗನ್ನಾಥ್ ಮಿಶ್ರಾಗೆ 5 ವರ್ಷ ಜೈಲು!

ಮೇವು ಹಗರಣದ 3ನೇ ಪ್ರಕರಣದಲ್ಲಿಯೂ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರು ಅಪರಾಧಿಗಳು...

ಮೇವು ಹಗರಣದ 3ನೇ ಪ್ರಕರಣದ ತೀರ್ಪು ಪ್ರಕಟ; ಲಾಲೂ, ಜಗನ್ನಾಥ್ ಮಿಶ್ರಾಗೆ 5 ವರ್ಷ ಜೈಲು!
ಸಂಗ್ರಹ ಚಿತ್ರ
Published On :
ರಾಂಚಿ: ಮೇವು ಹಗರಣದ 3ನೇ ಪ್ರಕರಣದಲ್ಲಿಯೂ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರು ಅಪರಾಧಿಗಳು ಎಂದು  ರಾಂಚಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಇಬ್ಬರಿಗೂ ತಲಾ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಇಂದು ಬೆಳಗ್ಗೆಯಷ್ಟೇ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿತ್ತು. ಚಾಯಿಬಾಸಾ  ಖಜಾನೆಯಲ್ಲಿ ರು.33.67 ಕೋಟಿ ಮೊತ್ತದ ವಂಚನೆ ಪ್ರಕರಣದ ಸಂಬಂಧ ಇಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ಲಾಲು ಪ್ರಸಾದ್ ಮಾತ್ರವಲ್ಲದೇ ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾ ಅವರನ್ನು ಅಪರಾಧಿ  ಎಂದು ಘೋಷಣೆ ಮಾಡಿರುವ ನ್ಯಾಯಾಲಯ ಅವರಿಗೂ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ಇಬ್ಬರಿಗೂ ತಲಾ 10 ಲಕ್ಷ ರು.ಗಳ ದಂಡ ವಿಧಿಸಿದೆ.
ಇದರೊಂದಿಗೆ ಮೇವು ಹಗರಣದ ಒಟ್ಟು ಆರು ಪ್ರಕರಣಗಳ ಪೈಕಿ ಒಟ್ಟು ಮೂರು  ಪ್ರಕರಣಗಳಲ್ಲಿ ಲಾಲು ಪ್ರಸಾದ್‌ ಅವರು ದೋಷಿ ಎಂದು ಘೋಷಣೆಯಾಗಿದ್ದು, ಲಾಲು ಪ್ರಸಾದ್ ಅವರಿಗೆ 2013ರಲ್ಲಿ ಐದು ವರ್ಷ ಹಾಗೂ  2017ರಲ್ಲಿ ಮೂರೂವರೆ ವರ್ಷ ಜೈಲು ಶಿಕ್ಷೆಯಾಗಿತ್ತು. ಕಳೆದ ಡಿಸೆಂಬರ್ 23ರಂದು ಸಿಬಿಐ ನ್ಯಾಯಾಲಯ ಮೇವು ಹಗರಣದ ಎರಡನೇ ಪ್ರಕರಣದ ತೀರ್ಪು ಪ್ರಕಟಿಸಿತ್ತು. ಆ ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ಬಿಹಾರದ ಮಾಜಿ  ಮುಖ್ಯಮಂತ್ರಿ ಜಗನ್ನಾಥ್‌ ಮಿಶ್ರಾ ಅವರನ್ನು ಮೂರನೇ ಪ್ರಕರಣದಲ್ಲಿ ನ್ಯಾಯಾಲಯ ದೋಷಿ ಎಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.