ದೇಶ

ಭಾರತದ ಸೇನಾ ಬತ್ತಳಿಕೆಗೆ ರಷ್ಯಾದ ಮತ್ತಷ್ಟು ಎಂಐ-17ವಿ-5 ಹೆಲಿಕಾಪ್ಟರ್ ಗಳು!

ರಷ್ಯಾ ಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿರುವ ಎಂಐ17ವಿ5 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದಾಗಿದ್ದು. ಒಟ್ಟು 48 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಒಪ್ಪಿಗೆ ನೀಡಿದೆ ಎಂದು ರಷ್ಯಾದ ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ತಿಳಿಸಿದೆ.

ಭಾರತದ ಸೇನಾ ಬತ್ತಳಿಕೆಗೆ ರಷ್ಯಾದ ಮತ್ತಷ್ಟು ಎಂಐ-17ವಿ-5 ಹೆಲಿಕಾಪ್ಟರ್ ಗಳು!
ರಷ್ಯಾದ ಎಂಐ17ವಿ5 ಹೆಲಿಕಾಪ್ಟರ್ ಗಳು
Published On :
ನವದೆಹಲಿ: ರಷ್ಯಾ ಸೇನೆಯ ಅತ್ಯಾಧುನಿಕ ಹೆಲಿಕಾಪ್ಟರ್ ಗಳಲ್ಲಿ ಒಂದಾಗಿರುವ ಎಂಐ17ವಿ5 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಮುಂದಾಗಿದ್ದು. ಒಟ್ಟು 48 ಹೆಲಿಕಾಪ್ಟರ್ ಗಳ ಖರೀದಿಗೆ ಭಾರತ ಒಪ್ಪಿಗೆ ನೀಡಿದೆ ಎಂದು ರಷ್ಯಾದ  ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ನ ಸಿಇಒ ಸರ್ಗೆ ಕೆಮೆಶೋವ್ ಅವರು, 48 ಎಂಐ17ವಿ5 ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡುವ ಸಂಬಂಧ ಭಾರತ ಸರ್ಕಾರದೊಂದಿಗೆ ಚರ್ಚಿಸಲಾಗಿದೆ.  ಅದರನ್ವಯ ರಷ್ಯಾದಿಂದ ಒಟ್ಟು 48 ಎಂಐ ಹೆಲಿಕಾಪ್ಟರ್ ಗಳನ್ನು ಖರೀದಿ ಮಾಡಲು ಭಾರತ ಮುಂದಾಗಿದೆ. ಮುಂಬರುವ ಮಾರ್ಚ್ ನಲ್ಲಿ ಈ ಬಗೆಗಿನ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕುವ ಸಾಧ್ಯತೆ ಇದೆ ಎಂದು  ತಿಳಿಸಿದರು.
ಅಂತೆಯೇ ರಷ್ಯಾ ನಿರ್ಮಿತ ಎಂಐ-17ಮತ್ತು ಎಂಐ18 ಹೆಲಿಕಾಪ್ಟರ್ ಕುರಿತು ಮಾತನಾಡಿದ ಸರ್ಗೆ ಕೆಮೆಶೋವ್, ಎಂಐ ಹೆಲಿಕಾಪ್ಟರ್ ಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದು, ಇದೇ ರೀತಿ ಎಂಐ171ಎ2 ಹೆಲಿಕಾಪ್ಟರ್  ಬಹುಪಯೋಗಿ ಹೆಲಿಕಾಪ್ಟರ್ ಗಳಾಗಿದ್ದು, ಶಕ್ತಿಶಾಲಿ ಇಂಧನ ವ್ಯವಸ್ಥೆ, ವೇಗವನ್ನು ಹೊಂದಿವೆ. ಈ ಹಿಂದೆ ಇದ್ದ ಹೆಲಿಕಾಪ್ಟರ್ ಗಳಿಗಿಂತ ಈಗಿನ ಹೆಲಿಕಾಪ್ಟರ್ ಗಳು ಅಪ್ ಗ್ರೇಡ್ ಆಗಿದ್ದು, ಅವುಗಳ ರೋಟರ್, ಗೇರ್ ಸಿಸ್ಟಮ್ಸ್ ಮತ್ತು  ಫ್ಯೂಸ್ಲೇಜ್ ಮತ್ತು ಸುಧಾರಿತ ಏವಿಯೋನಿಕ್ಸ್ ಅನ್ನು ನವೀಕರಿಸಲಾಗಿದೆ. ಹೆಲಿಕಾಪ್ಟರ್ ನಲ್ಲಿ ಈ ವರೆಗೂ ಸುಮಾರು 80 ವಿಭಾಗಗಳನ್ನು ಆಧುನೀಕರಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಒಟ್ಟು 151 ಎಂಐ ಹೆಲಿಕಾಪ್ಟರ್ ಗಳಿದ್ದು, ಇದಕ್ಕೆ ಮತ್ತೆ 48 ಅತ್ಯಾಧುನಿಕ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಲಿವೆ. 2016ರ ಜನವರಿಯಲ್ಲಿ ಕೊನೆಯ ಬಾರಿಗೆ ಎಂಐ ಹೆಲಿಕಾಪ್ಟರ್   ಅನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಇನ್ನು ನೂತನ ಹೆಲಿಕಾಪ್ಚರ್ ಗಳಲ್ಲಿ ನೂತನ ಅತ್ಯಾಧುನಿಕ ನೈಟ್ ವಿಷನ್ ವ್ಯವಸ್ಥೆ, ಹವಾಮಾನ ಪತ್ತೆ ವ್ಯವಸ್ಥೆಯ ರಾಡಾರ್, ಪಿಕೆವಿ-8 ಆ್ಯಟೋ ಪೈಲಟ್, ಕೆಎನ್ ಇ-ಐ8 ಅವಿಯಾನಿಕ್ಸ್  ಸೂಟ್ ಗಳಿರಲಿವೆಯಂತೆ.
ಅಂತೆಯೇ ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್  ತನ್ನ ನೂತನ ಕೆಎ 226ಟಿ ಹೆಲಿಕಾಪ್ಟರ್ ಗಳ ಖರೀದಿ ಕುರಿತು ಭಾರತ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಭಾರತೀಯ ಸೇನೆಗೆ ಬೇಕಿರುವ ಎಲ್ಲ ವೈಶಿಷ್ಟ್ಯಗಳನ್ನು ಈ ಕಾಪ್ಚರ್ ಹೊಂದಿದೆ.  ಭಾರತ ಸರ್ಕಾರ ಕೂಡ ಈ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಶೀಘ್ರ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ರಾಸ್ಟೆಕ್ ಸ್ಟೇಟ್ ಕಾರ್ಪೋರೇಷನ್ ಸಂಸ್ಥೆ ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.