ವಧುವಿನ ಕನ್ಯತ್ವ ಪರೀಕ್ಷೆ ವಿರೋಧಿಸಿದ ಯುವಕರ ಮೇಲೆ ಮದುವೆ ಮಂಟಪದಲ್ಲೇ ಹಲ್ಲೆ
ವಧುವಿನ ಕನ್ಯತ್ವ ಪರೀಕ್ಷೆ ವಿರೋಧಿಸಿದ ಯುವಕರಿಗೆ ಮದುವೆ ಮಂಟಪದಲ್ಲೇ ಥಳಿಸಿರುವ ಘಟನೆ ಯುರವಾಡದ ಭರತ್ ನಗರದಲ್ಲಿ ನಡೆದಿದೆ.

ಪುಣೆ: ವಧುವಿನ ಕನ್ಯತ್ವ ಪರೀಕ್ಷೆ ವಿರೋಧಿಸಿದ ಯುವಕರಿಗೆ ಮದುವೆ ಮಂಟಪದಲ್ಲೇ ಥಳಿಸಿರುವ ಘಟನೆ ಯುರವಾಡದ ಭರತ್ ನಗರದಲ್ಲಿ ನಡೆದಿದೆ.
ಪಂಪ್ರಿಯಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಸಮುದಾಯದ ಮುಖಂಡರು ಸಭೆ ನಡೆಸಿ ಕನ್ಯತ್ವ ಪರೀಕ್ಷೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದ್ದು, ಆ ಪರೀಕ್ಷೆ ನಡೆಯಬೇಕೆಂದು ನಿರ್ಧರಿಸಲಾಗಿದೆ.
ಆದರೆ, ಇಂತಹ ಪದ್ದತಿಯನ್ನು ಯುವಕರ ಗುಂಪೊಂದು ವಿರೋಧಿಸುತ್ತಾ ಬಂದಿದ್ದು, ವಾಟ್ಸಾಪ್ ನಲ್ಲಿ ಗುಂಪು ರೂಪಿಸಿಕೊಂಡು ಇದರ ವಿರುದ್ಧ ಧ್ವನಿ ಎತ್ತುವ ಕೆಲಸದಲ್ಲಿ ನಿರತವಾಗಿದೆ.ವಧುವಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಮುದಾಯದಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ .
ಮದುವೆ ಮಂಟಪದಲ್ಲಿದ್ದ ಆ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಭರತ್ ನಗರದ ನಿವಾಸಿ ಪ್ರಶಾಂತ್ ಅಂಕುಶ್ ಇಂದ್ರೇಕರ್ ನೀಡಿರುವ ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 40 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಆಯುಕ್ತ ಗಣೇಶ್ ಶಿಂಧೆ ತಿಳಿಸಿದ್ದಾರೆ.
ನಂತರ ಮಹಾರಾಷ್ಟ್ರ ಅಂದಶ್ರದ್ಧ ನಿರ್ಮೂಲನಾ ಸಮಿತಿ ನೆರವಿನೊಂದಿಗೆ ವಾಟ್ಸಪ್ ಗುಂಪಿನ ಯುವಕರು ಉಪ ಆಯುಕ್ತ ದೀಪಕ್ ಸಕೊರೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದು, ಕನ್ಯತ್ವ ಪರೀಕ್ಷೆ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಭರತ್ ನಗರದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


