1947ರಲ್ಲೇ ಶತೃತ್ವ ಮರೆತಿದ್ದೇವೆ.. ಆದರೆ ಪಾಕಿಸ್ತಾನ ಮರೆತಿಲ್ಲ: ಮೋಹನ್ ಭಾಗ್ವತ್
ಭಾರತ ದೇಶ 1947ರ ಶತೃತ್ವವನ್ನು ಮರೆತಿದೆಯಾದರೂ, ಪಾಕಿಸ್ತಾನ ಮಾತ್ರ ಇನ್ನೂ ಅದನ್ನು ಮರೆತಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

Published On :
ಗುವಾಹತಿ: ಭಾರತ ದೇಶ 1947ರ ಶತೃತ್ವವನ್ನು ಮರೆತಿದೆಯಾದರೂ, ಪಾಕಿಸ್ತಾನ ಮಾತ್ರ ಇನ್ನೂ ಅದನ್ನು ಮರೆತಿಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಬ್ರಹ್ಮಪುತ್ರಾ ನದಿದಂಡೆಯ ಲೂತ್ ಪೊರಿಯ ಹಿಂದೂ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಭಾಗ್ವತ್, ಪಾಕಿಸ್ತಾನ ಕೂಡ ಹಿಂದೂಸ್ತಾನದ ಭಾಗವಾಗಿದ್ದು, ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದದ್ದು ಪಾಕಿಸ್ತಾನದಿಂದಲೇ.. ಆದರೂ ಪಾಕಿಸ್ತಾನ ತನ್ನನ್ನು ಭಾರತ ಎಂದು ಕರೆದುಕೊಳ್ಳುತ್ತಿಲ್ಲ. ಏಕೆಂದರೆ ಇದರಲ್ಲಿ ಹಿಂದುತ್ವದ ಕಂಪು ಹೊರಸೂಸುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನ ತನ್ನನ್ನು ತಾನು ಹಿಂದೂಸ್ತಾನ ಎಂದು ಕರೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಹಿಂದುತ್ವ ಇರುವವರೆಗೂ ಭಾರತ ಉಳಿಯುತ್ತದೆ ಎಂದ ಭಾಗ್ವತ್ ಪಾಕಿಸ್ತಾನ ಕೂಡ ಹಿಂದುತ್ವದ ಭಾಗವಾಗಿದೆ. ಭಾರತ ಸುಸ್ಥಿರವಾಗಿಡಲು ವೈವಿಧ್ಯತೆಯೇ ಬಲವಾಗಿರುವ ಹಿಂದುತ್ವ ಇಂಧನವಾಗಿದ್ದು, ಪ್ರಾಚೀನ ಭಾರತೀಯ ನಾಗರಿಕತೆ ಬೆಳೆದುಬಂದಿರುವುದು ಇಂದಿನ ಪಾಕಿಸ್ತಾನದಲ್ಲೇ. ಆದರೆ ಇದು ಭಾರತ ಎಂದು ಹೆಸರಿಕೊಳ್ಳದಿರಲು ಕಾರಣ ಈ ಪದ ಹಿಂದುತ್ವದ ಕಂಪು ಹೊಂದಿರುವುದು" ಎಂದು ಅವರು ಹೇಳಿದರು.
ಭಾರತ, ಪಾಕಿಸ್ತಾನದ ಜತೆಗಿನ ದ್ವೇಷ-ಭಾವನೆಯನ್ನು 1947ರ ಆಗಸ್ಟ್ 15ರಂದೇ ಮರೆತಿದೆಯಾದರೂ ಪಾಕಿಸ್ತಾನ ಮರೆತಿಲ್ಲ. ಹಿಂದುತ್ವ ಎನ್ನುವುದು ಹಿಂದೂಯಿಸಂ ಅನ್ನು ಮೀರಿದ ಸಿದ್ಧಾಂತವಾಗಿದೆ. ಭಾರತವ ವೈಶಿಷ್ಟ್ಯ ಇರುವುದು ವೈವಿಧ್ಯತೆಯಲ್ಲಿ. ವೈವಿಧ್ಯತೆಯ ಹೊರತಾಗಿಯೇ ಭಾರತೀಯರಲ್ಲಿ ಒಗ್ಗಟ್ಟಿನ ಭಾವನೆ ಇದೆ. ಭಾರತೀಯ ಸಂಪ್ರದಾಯ ಎಲ್ಲರಿಗೆ, ಎಲ್ಲ ಸಮುದಾಯಕ್ಕೆ, ಎಲ್ಲ ಧರ್ಮಕ್ಕೂ ಒಂದೇ. ಜೀವನಮಾರ್ಗ ಮತ್ತು ನಡವಳಿಕೆಯ ಪಾಠವನ್ನು ಇಡೀ ವಿಶ್ವಕ್ಕೆ ಭಾರತ ಬೋಧಿಸಿದೆ ಎಂದು ಅವರು ಹೇಳಿದರು.
ಇನ್ನು ಪ್ರಸ್ತುತ ನಡೆಯುತ್ತಿರುವ ಹಿಂದೂ ಸಮ್ಮೇಳನ ಅತೀ ದೊಡ್ಡ ಸಮ್ಮೇಳನ ಎಂದು ಹೇಳಲಾಗುತ್ತಿದ್ದು, ಇದರ ಮುಂದುವರೆದ ಭಾಗವಾಗಿ ತ್ರಿಪುರಾದಲ್ಲಿ ಫೆಬ್ರವರಿ 17 ಹಾಗೂ ಮೇಘಾಲಯ ಹಾಗೂ ನಾಗಾಲ್ಯಾಂಡ್ ನಲ್ಲಿ ಫೆಬ್ರವರಿ 27ಕ್ಕೆ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RSSPakistanಪಾಕಿಸ್ತಾನಆರ್ ಎಸ್ ಎಸ್GuwahatiMohan Bhagwatಮೋಹನ್ ಭಾಗ್ವತ್ಗುವಾಹತಿ1947Indo-pak War1947ರ ಇಂಡೋ-ಪಾಕ್ ಯುದ್ಧ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


