ಉದ್ಯೋಗ ಸೃಷ್ಟಿ, ಅತ್ಯಾಚಾರ ತಡೆಗೆ ನಿಮ್ಮ ಯೋಜನೆ ಏನು?: ಮೋದಿಗೆ ರಾಹುಲ್ ಪ್ರಶ್ನೆ
ಉದ್ಯೋಗ ಸೃಷ್ಟಿಸಲು, ಡೊಕ್ಲಾಮ್ ನಿಂದ ಚೀನಿಯರನ್ನು ಹೊರಹಾಕಲು ಮತ್ತು ಹರಿಯಾಣದಲ್ಲಿನ ಅತ್ಯಾಚಾರ ತಡೆಯಲು ನಿಮ್ಮ ಯೋಜನೆಗಳು...

Published On :
ನವದೆಹಲಿ: ಉದ್ಯೋಗ ಸೃಷ್ಟಿಸಲು, ಡೊಕ್ಲಾಮ್ ನಿಂದ ಚೀನಿಯರನ್ನು ಹೊರಹಾಕಲು ಮತ್ತು ಹರಿಯಾಣದಲ್ಲಿನ ಅತ್ಯಾಚಾರ ತಡೆಯಲು ನಿಮ್ಮ ಯೋಜನೆಗಳು ಏನು ಎಂಬುದನ್ನು ವಿವರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ.
ಜನವರಿ 28ರಂದು ಪ್ರಸಾರವಾಗಲಿರುವ 'ಮನ್ ಕಿ ಬಾತ್' ಬಗ್ಗೆ ನಿಮ್ಮ ವಿಚಾರಗಳನ್ನು ತಿಳಿಸಿ ಎಂದು ಪ್ರಧಾನಿ ಮೋದಿ ದೇಶದ ಜನತೆಯನ್ನು ಕೇಳಿದ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಉದ್ಯೋಗ ಸೃಷ್ಟಿ, ಅತ್ಯಾಚಾರ ತಡೆಗೆ ನಿಮ್ಮ ಯೋಜನೆ ಏನು? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
ಆತ್ಮೀಯ ನರೇಂದ್ರ ಮೋದಿ ಅವರೇ, ನೀವು ನಿಮ್ಮ ಮನ್ ಕಿ ಬಾತ್ ಬಗ್ಗೆ ಜನರಿಗೆ ವಿಚಾರ ತಿಳಿಸುವಂತೆ ಮನವಿ ಮಾಡಿದ್ದೀರಿ, ಆದರೆ ನಮ್ಮ ಯುವಕರು ಉದ್ಯೋಗ ಪಡೆಯುವುದು ಹೇಗೆ?, ಡೊಕ್ಲಾಮ್ ನಿಂದ ಚೀನಿಯರನ್ನು ಹೊರ ಹಾಕುವುದು ಹೇಗೆ? ಮತ್ತು ಹರಿಯಾಣದಲ್ಲಿ ಅತ್ಯಾಚಾರ ತಡೆಯಲು ನಿಮ್ಮ ಯೋಜನೆಗಳು ಏನು? ಎಂಬುದನ್ನು ವಿವರಿಸಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗೆ ಹರಿಯಾಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಆಡಳಿತರೂಢ ಬಿಜೆಪಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


