ದೇಶ

ಮಂಗಳೂರು: ಪಾನಮತ್ತ ಪೈಲೆಟ್ ನಿಂದ ದುಬೈ ಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ 4 ಗಂಟೆ ವಿಳಂಬ

ಮಂಗಳೂರಿನಿಂದ ದುಬೈ ಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ ಪಾನಮತ್ತ ಪೈಲೆಟ್ ನಿಂದಾಗಿ 4 ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ಜ.17 ರಂದು ರಾತ್ರಿ ನಡೆದಿದೆ.

ಮಂಗಳೂರು: ಪಾನಮತ್ತ ಪೈಲೆಟ್ ನಿಂದ ದುಬೈ ಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ 4 ಗಂಟೆ ವಿಳಂಬ
ಸ್ಪೈಸ್ ಜೆಟ್
Published On :
ಮಂಗಳೂರು: ಮಂಗಳೂರಿನಿಂದ ದುಬೈ ಗೆ ತೆರಳಬೇಕಿದ್ದ ಸ್ಪೈಸ್ ಜೆಟ್ ವಿಮಾನ ಪಾನಮತ್ತ ಪೈಲೆಟ್ ನಿಂದಾಗಿ 4 ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ಜ.17 ರಂದು ರಾತ್ರಿ ನಡೆದಿದೆ. 
180 ಪ್ರಯಾಣೀಕರಿದ್ದ ಸ್ಪೈಸ್ ಜೆಟ್ ಎಸ್ ಜಿ-೦59 ವಿಮಾನ, ಮಂಗಳೂರಿನಿಂದ 12:15 ಕ್ಕೆ ಟೇಕ್ ಆಫ್ ಆಗಬೇಕಿತ್ತು. ಆದರೆ ವಿಮಾನ ಹೊರಡುವುದಕ್ಕೂ ಮುನ್ನ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಸಹ ಪೈಲೆಟ್ ಉಲ್ಕು ಎರಿಕ್ ಪಾನಮತ್ತನಾಗಿರುವುದು ಕಂಡುಬಂದಿದೆ. ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಆತನಿಗೆ ವಿಮಾನ ಚಾಲನೆ ಮಾಡಲು ಅವಕಾಶ ನೀಡದೇ ಮತ್ತೋರ್ವ ಪೈಲೆಟ್ ನ್ನು ಕರೆಸಿ ವಿಮಾನ ಟೇಕ್ ಆಫ್ ಆಗುವ ವೇಳೆಗೆ ಬೆಳಿಗ್ಗೆ 4:30 ಆಗಿತ್ತು 
ಪಾನಮತ್ತನಾಗಿದ್ದ ಪೈಲೆಟ್ ಟರ್ಕಿಯ ವಿಮಾನ ಸಂಸ್ಥೆಗೆ ಸೇರಿದ್ದವರಾಗಿದ್ದು, ಸ್ಪೈಸ್ ಜೆಟ್ ಹಾಗೂ ಟರ್ಕಿಯ ವಿಮಾನ ಸಂಸ್ಥೆಯ ಒಪ್ಪಂದದ ಮೇರೆಗೆ ಪೈಲೆಟ್ ನ್ನು ನಿಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.