ಗಾಂಧಿನಾಡಲ್ಲಿ ಇಸ್ರೇಲ್ ಪ್ರಧಾನಿ; ಅಹ್ಮದಾಬಾದ್ ನಲ್ಲಿ ನೇತಾನ್ಯಹು- ಪ್ರಧಾನಿ ಮೋದಿ ರೋಡ್ ಶೋ
ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬುಧವಾರ ಪ್ರಧಾನಿ ಮೋದಿ ತವರು ಗುಜರಾತ್ ಗೆ ಭೇಟಿ ನೀಡಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಮತ್ತು ಅವರ ಪತ್ನಿಯನ್ನು ಸ್ವಾಗತಿಸಿದ್ದಾರೆ.

Published On :
ಅಹ್ಮದಾಬಾದ್: ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬುಧವಾರ ಪ್ರಧಾನಿ ಮೋದಿ ತವರು ಗುಜರಾತ್ ಗೆ ಭೇಟಿ ನೀಡಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಮತ್ತು ಅವರ ಪತ್ನಿಯನ್ನು ಸ್ವಾಗತಿಸಿದ್ದಾರೆ.
ಅಹ್ಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ಪ್ರಧಾನಿ ನೇತಾನ್ಯಹು ಜಂಟಿ ರೋಡ್ ಶೋ ನಡೆಸುತ್ತಿದ್ದು, ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮದವರೆಗೆ ಉಭಯ ನಾಯಕರು ರೋಡ್ ಶೋ ನಡೆಸಿದ್ದಾರೆ. ಬಳಿಕ ಸಾಬರಮತಿ ಅಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಂತೆಯೇ ಗಾಂಧಿ ಅವರ ಚರಕದಲ್ಲಿ ಹತ್ತಿದಾರ ನೇಯುವ ಮೂಲಕ ನೇತಾನ್ಯಹು ದಂಪತಿ ವಿಶಿಷ್ಟ ಅನುಭವ ಪಡೆದರು. ಈ ವೇಳೆ ಪ್ರಧಾನಿ ಮೋದಿ ಚರತ ಮತ್ತು ಅದರ ವಿಶಿಷ್ಟತೆ ಹಾಗೂ ಗಾಂಧೀಜಿ ಅದನ್ನು ಬಳಕೆ ಮಾಡುತ್ತಿದ್ದರ ಬಗ್ಗೆ ಮಾಹಿತಿ ನೀಡಿದರು.
ಇನ್ನು 2 ದಿನಗಳ ಕಾಲ ಇಸ್ರೇಲ್ ಪ್ರಧಾನಿ ನೇತಾನ್ಯಹು ಅಹ್ಮದಾಬಾದ್ ನಲ್ಲೇ ಉಳಿದುಕೊಳ್ಳಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ನೇತಾನ್ಯಹು ದಂಪತಿಗೆ ವಿಶೇಷ ಔತಣಕೂಟ ಕೂಡ ಏರ್ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಜಮಿನ್PM ModiBenjamin NetanyahuIsrael PM In Indiaಭಾರತದಲ್ಲಿ ಇಸ್ರೇಲ್ ಪ್ರಧಾನಿAhmedabad Road ShowIsrael PM in Gujaratಅಹ್ಮದಾಬಾದ್ ರೋಡ್ ಶೋಗುಜರಾತ್ ನಲ್ಲಿ ಇಸ್ರೇಲ್ ಪ್ರಧಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


