ದೇಶ

ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಿ: ನಯನತಾರಾ ಸೆಹಗಲ್

ದೇಶದಲ್ಲಿ ರಾಜಕೀಯ ಪರಿಸ್ಥಿತಿ ಯಾರಿಗೂ ಅನುಕೂಲಕರವಾಗಿಲ್ಲ ಎಂದು ಲೇಖಕಿ ನಯನತಾರ ಸೆಹಗಲ್ ಹೇಳಿದ್ದು, ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಬೇಕಾಗಿ ಕರೆ ನೀಡಿದ್ದಾರೆ.

ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಿ: ನಯನತಾರಾ ಸೆಹಗಲ್
ನಯನತಾರಾ ಸೆಹಗಲ್
Published On :
ಕೋಲ್ಕತ್ತಾ: ದೇಶದಲ್ಲಿ ರಾಜಕೀಯ ಪರಿಸ್ಥಿತಿ ಯಾರಿಗೂ ಅನುಕೂಲಕರವಾಗಿಲ್ಲ ಎಂದು ಲೇಖಕಿ ನಯನತಾರ ಸೆಹಗಲ್ ಹೇಳಿದ್ದು, ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಬೇಕಾಗಿ ಕರೆ ನೀಡಿದ್ದಾರೆ. 
ಕೋಲ್ಕತ್ತಾ ಸಾಹಿತ್ಯ ಹಬ್ಬ-2018 ರಲ್ಲಿ ಭಾಗವಹಿಸಿ ಮಾತನಾಡಿರುವ ನಯನತಾರಾ ಸೆಹಗಲ್, ಹಿಂದುತ್ವ ಹಿಂದೂ ಧರ್ಮಕ್ಕಿಂತ ಭಿನ್ನವಾಗಿದ್ದು, ಉಂಟಾಗುತ್ತಿರುವ ಹಿಂಸಾಚಾರಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈಗಿರುವುದು ಅತ್ಯಂತ ಭಿನ್ನವಾದ ಪರಿಸ್ಥಿತಿ, ಪ್ರಸ್ತುತ ಇರುವ ಪರಿಸ್ಥಿತಿ ಯಾರಿಗೂ ಅನುಕೂಲಕರವಾಗಿಲ್ಲ. ಯಾರು ತಮ್ಮ ತತ್ವವನ್ನು ಒಪ್ಪುವುದಿಲ್ಲವೋ ಅಂತಹವರನ್ನು ಹತ್ಯೆ ಮಾಡಲಾಗುತ್ತಿದೆ, ಇತ್ತೀಚೆಗೆ ಗೌರಿ ಲಂಕೇಶ್ ಅವರನ್ನೂ ಹತ್ಯೆ ಮಾಡಲಾಗಿದೆ. ಕೇವಲ ಬರಹಗಾರರಷ್ಟೇ ಅಲ್ಲ, ದನಗಳನ್ನು ಸಾಗಿಸುತ್ತಿರುವವರನ್ನೂ ಹತ್ಯೆ ಮಾಡಲಾಗುತ್ತಿದೆ. ಇಂತಹ ಘಟನೆಗಳನ್ನು ತಡೆಗಟ್ಟಬೇಕಾದರೆ ಹಿಂದುತ್ವವನ್ನು ತಿರಸ್ಕರಿಸಬೇಕು, ಹಿಂದುತ್ವದಿಂದ ಹಿಂಸಾಚಾರ ಉಂಟಾಗುತ್ತಿದೆ. ಹಿಂದುತ್ವ ಅತ್ಯಂತ ಅಪಾಯಕಾರಿ ಸಿದ್ಧಾಂತವಾಗಿದ್ದು, ಹಿಂದೂ ಧರ್ಮಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.