ದೇಶ

ಮುಂಬೈನಲ್ಲಿ ಮೊದಲ ಸಲಿಂಗ ಮದುವೆ; ಹಿಂದೂ ಸಂಪ್ರದಾಯಂತೆ ಮದುವೆ!

ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚೀನಾದ ಯುವಕನೊಂದಿಗೆ ಭಾರತೀಯ ಯುವಕ ಸಲಿಂಗ ಮದುವೆ ಮಾಡಿಕೊಂಡಿದ್ದಾರೆ...

ಮುಂಬೈನಲ್ಲಿ ಮೊದಲ ಸಲಿಂಗ ಮದುವೆ; ಹಿಂದೂ ಸಂಪ್ರದಾಯಂತೆ ಮದುವೆ!
ವಿವಾಹ
Published On :
ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚೀನಾದ ಯುವಕನೊಂದಿಗೆ ಭಾರತೀಯ ಯುವಕ ಸಲಿಂಗ ಮದುವೆ ಮಾಡಿಕೊಂಡಿದ್ದಾರೆ. 
ಮಹಾರಾಷ್ಟ್ರದ ಯವತ್ಮಾಲ್ ನ ಯುವಕ ಹಿಂದೂವಾಗಿದ್ದು ಅಮೆರಿಕಕ್ಕೆ ಉದ್ಯೋಗಕ್ಕೆ ತೆರಳಿದ್ದಾಗ ಅಲ್ಲಿ ಈತನಿಗೆ ಚೀನಾದ ಯುವಕನ ಪರಿಚಯವಾಗಿತ್ತು. ಅಂತೆಯೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು ವಿವಾಹವಾಗಲು ನಿರ್ಧರಿಸಿದ್ದರು. 
ಗುರುವಾರ ಇಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿತು. ಕುಟುಂಬಸ್ಥರೇ ಮುಂದೆ ನಿಂತು ಸಂಪ್ರದಾಯದಂತೆ ಸಲಿಂಗ ವಿವಾಹ ನೆರವೇರಿಸಿದ್ದಾರೆ. ಮೊದಲಿಗೆ ಯವತ್ಮಾಲ್ ಯುವಕ ತಂದೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊನೆಗೆ ವಿಧಿ ಇಲ್ಲದೆ ಮಗನ ಸಲಿಂಗ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. 
ಭಾರತೀಯ ಹಾಗೂ ಚೀನಾ ಯುವಕನ ಸಲಿಂಗ ವಿವಾಹ ಭಾರೀ ಚರ್ಚೆ ಹುಟ್ಟು ಹಾಕಿದ್ದು ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.