ಬಿಜೆಪಿ ಶಾಸಕನಿಂದ ಪುತ್ರಿ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉತ್ತರಾಖಂಡ್ ಸರ್ಕಾರದ ಲಾಂಛನ ಬಳಕೆ
ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉತ್ತರಾಖಂಡ್ ರಾಜ್ಯದ ಬಿಜೆಪಿ ಶಾಸಕರೊಬ್ಬರು ಸರ್ಕಾರದ ಲಾಂಛನವನ್ನು ಬಳಕೆ ಮಾಡಿದ್ದು, ಇದೀಗ ಹಲವು ಟೀಕೆಗಳಿಗೆ ದಾರಿ ಮಾಡಿಕೊಟ್ಟಿದೆ...

Published On :
ಹರಿದ್ವಾರ: ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಉತ್ತರಾಖಂಡ್ ರಾಜ್ಯದ ಬಿಜೆಪಿ ಶಾಸಕರೊಬ್ಬರು ಸರ್ಕಾರದ ಲಾಂಛನವನ್ನು ಬಳಕೆ ಮಾಡಿದ್ದು, ಇದೀಗ ಹಲವು ಟೀಕೆಗಳಿಗೆ ದಾರಿ ಮಾಡಿಕೊಟ್ಟಿದೆ.
ಪುತ್ರಿಯ ವಿವಾಹ ಹಿನ್ನಲೆ ಬಿಜೆಪಿ ಶಾಸಕ ಸುರೇಶ್ ರಾಥೋಡ್ ಅವರು ವಿವಾಹ ಆಮಂತ್ರಣ ಪತ್ರಿಕೆಯ ಮುಂಭಾಗದಲ್ಲಿ ಸರ್ಕಾರದ ಲಾಂಛನವನ್ನು ಬಳಕೆ ಮಾಡಿದ್ದಾರೆ.
ಸರ್ಕಾರದ ಲಾಂಛನ ಬಳಕೆಯನ್ನು ಸಮರ್ಥಿಸಿಕೊಂಡಿರುವ ರಾಥೋಡ್ ಅವರು, ನಾನೂ ಕೂಡ ಸರ್ಕಾರದ ಭಾಗವಾಗಿದ್ದು, ಸರ್ಕಾರದ ಲಾಂಛನ ಬಳಕೆ ಮಾಡಿಕೊಳ್ಳುವ ಮೂಲಕ ನಾನೇನು ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.
ಕಡುಬಡತನದಲ್ಲಿರುವ ಯುವತಿಯೊಬ್ಬಳ ವಿವಾಹವನ್ನು ನಾನು ನನ್ನ ಸ್ವಂತ ಮಗಳ ಮದುವೆಯಂತೆ ಮಾಡುತ್ತಿದ್ದೇನೆ. ಅದನ್ನೇಕೆ ನೋಡುತ್ತಿಲ್ಲ? ನಾನು ಸರ್ಕಾರದ ಒಂದು ಭಾಗವಾಗಿದ್ದೇನೆ. ಹೀಗಾಗಿ ಮದುವೆ ಆಮಂತ್ರಣ ಪತ್ರಿಕೆ ಮೇಲೆ ಸರ್ಕಾರದ ಲಾಂಛನವನ್ನು ಬಳಸಿಕೊಂಡಿದ್ದೇನೆ. ನಾನೇನು ಅಪರಾಧ ಮಾಡಿಲ್ಲ. ಇದೀ ರೀತಿ ಸಾಕಷ್ಟು ಜನರು ಮಾಡಿರುವುದನ್ನು ನಾನು ನೋಡಿದ್ದೇನೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
UttarakhandBJP MLAಬಿಜೆಪಿ ಶಾಸಕಉತ್ತರಾಖಂಡ್Marriage invitationGovernment logoಮದುವೆ ಆಮಂತ್ರಣ ಪತ್ರಿಕೆಸರ್ಕಾರ ಲಾಂಛನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


