ದೇಶ

ಕಾಶ್ಮಿರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ: ಸಿಎಂ ಮೆಹಬೂಬಾ ಮುಫ್ತಿ

ಕಾಶ್ಮೀರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ...

ಕಾಶ್ಮಿರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ: ಸಿಎಂ ಮೆಹಬೂಬಾ ಮುಫ್ತಿ
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
Published On :
ಶ್ರೀನಗರ: ಕಾಶ್ಮೀರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ. 
ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಲ್ಲಿ ಉಗ್ರರು ಐಇಡಿ ಸ್ಫೋಟಿಸಿದ್ದು, ಪರಿಣಾಮ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ, ಘಟನೆಗೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು ಮೆಹಬೂಬಾ ಮುಫ್ತಿಯವರು, ಕಾಶ್ಮೀರದಲ್ಲಿರುವ ಹಿಂಸಾಚಾರವೆಂಬ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದ್ದು, ಇದಕ್ಕಾಗಿ ಜನರು ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. 
ಕಾಶ್ಮೀರದ ಜನತೆಯನ್ನು ರಕ್ಷಣೆ ಮಾಡುವ ಸಲುವಾಗಿ ಕರ್ತವ್ಯದಲ್ಲಿದ್ದ ಪೊಲೀಸರನ್ನು ಹತ್ಯೆ ಮಾಡಲಾಗಿದೆ. ಉಗ್ರ ನಿಜಕ್ಕೂ ದುರಾದೃಷ್ಟಕರ ಎಂದು ತಿಳಿಸಿದ್ದಾರೆ. 
ಉಗ್ರರು ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಈ ಹಿಂದೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಪ್ತಿಯವರು, ಉತ್ತರ ಕಾಶ್ಮೀರದ ಸೊಪೋರ್ ನಲ್ಲಿ ಉಗ್ರರು ಐಇಡಿ ಸ್ಫೋಟಿಸಿ ನಾಲ್ವರು ಪೊಲೀಸರನ್ನು ಬಲಿ ಪಡೆದುಕೊಂಡಿದ್ದಾರೆ. ಘಟನೆ ಬಹಳ ನೋವನ್ನು ತಂದಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.